ಮೃತ ವಿದ್ಯಾರ್ಥಿನಿ ಪೆರ್ಡೂರು ನಿವಾಸಿ ತೃಪ್ತಿ (17) ಹೆಬ್ರಿಯ ಎಸ್ ಆರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ.
2/ 7
ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದ ತೃಪ್ತಿ ತುಂಬಾ ಚೆನ್ನಾಗಿಯೇ ಓದುತ್ತಿದ್ದರು. ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಬಂದಿರುವ ಬಗ್ಗೆ ನೊಂದಿದ್ದರು ಎನ್ನಲಾಗಿದೆ.
3/ 7
ಇದೇ ಕಾರಣಕ್ಕೆ ಮನನೊಂದ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
4/ 7
ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂತು ಅಂತ ಪ್ರಿನ್ಸಿಪಾಲ್ ಎಲ್ಲರ ಮುಂದೆ ತೃಪ್ತಿಯನ್ನು ಬೈದಿದ್ದರಂತೆ
5/ 7
ಕಮ್ಮಿ ಮಾರ್ಕ್ಸ್ ಗೆ ಫೈನ್ ಹಾಕುವುದಾಗಿ ಹೇಳಿದ್ದ ಪ್ರಿನ್ಸಿಪಾಲ್ ದೀಪ್ತಿಗೆ ಬೈದಿದ್ದರಂತೆ.
6/ 7
ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿದ ತೃಪ್ತಿ ತಂದೆ, ಎಲ್ಲಾ ವಿದ್ಯಾರ್ಥಿಗಳ ಮುಂದೆ ನನ್ನ ಮಗಳನ್ನು ನಿಂದಿಸಿದ್ದಾರೆ.
7/ 7
ಹೀಗಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿದ್ದಾಳೆಂದು ತಂದೆ ಸುರೇಶ್ ಮೆಂಡನ್ ಹೇಳಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.