ಮಹಿಳೆಯರಿಗೆ ಸೀರೆ ಅಂದರೆ ತುಂಬಾ ಇಷ್ಟ ಪಡ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವುಗಳನ್ನು ಬಳಸುತ್ತಾರೋ, ಬಿಡ್ತಾರೋ ಗೊತ್ತಿಲ್ಲ, ಆದರೆ ಕಣ್ಣಿಗೆ ಚೆಂದವಾಗಿ ಕಾಣುವ ಸೀರೆಗಳನ್ನು ಖರೀದಿಸುವಲ್ಲಿ ಎಂದಿಗೂ ಮುಂದಿರುತ್ತಾರೆ. ಇನ್ನೂ ಡಿಸ್ಕೌಂಟ್ ಇದೆ ಅಂದರೆ ಕೇಳಬೇಕಾ? ನಾ ಮುಂದು.. ತಾ ಮುಂದು ಎಂದು ಮುಗಿ ಬೀಳುತ್ತಾರೆ. ಹೀಗಿ ಡಿಸ್ಕೌಂಟ್ನಲ್ಲಿ ಸೀರೆ ಖರೀದಿಸುವಾಗ ಸೀರೆಗಾಗಿ ಇಬ್ಬರು ಮಹಿಳೆಯರು ರಂಪಾಟ ನಡೆಸಿರುವ ವಿಡಿಯೋ ಭಾರೀ ವೈರಲ್ ಆಗಿದೆ.