ಇನ್ನು ಅಗೆದ ಹಳ್ಳಕೊಳ್ಳಗಳನ್ನ ಮುಚ್ಚಿಸಿ ಹಾಳಾದ ರಸ್ತೆಗಳಿಗೆ ತೇಪೆ ಹಾಕಿಸುವುದರಲ್ಲೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಅದರ ಪರಿಣಾಮವಾಗಿ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಹೀಗೆ ಜಿಲ್ಲಾ ಕೇಂದ್ರವಾಗಿದ್ದರೂ, ಒಂದು ರಸ್ತೆಯ ಎರಡು ಬದಿಯಲ್ಲಿ ಎಲ್ಲೂ ಪುಟ್ ಬಾತ್ ಕಾಣಸಿಗಲ್ಲ. ರಸ್ತೆಯ ಎರಡು ಬದಿಯಲ್ಲೂ ಅಕ್ರಮವಾಗಿ ಮಾರಾಟ ಮಾಡುವ ಬಂಡಿಗಳದ್ದೆ ದರ್ಬಾರು. ಇಲ್ಲೆ ಅರ್ಥವಾಗುತ್ತೆ ನಗರ ಪ್ರದೇಶ ಯಾವ ಮಟ್ಟಿಗೆ ಅಭಿವೃದ್ಧಿ ಹೊಂದಿದೆ ಎಂದು.