Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

ನಮ್ಮ ಮೆಟ್ರೋ ಹಳಿಗಳ ಮೇಲೆ ಇಬ್ಬರು ಇಳಿದ ಪರಿಣಾಮ ರೈಲುಗಳ ಸಂಚಾರದಲ್ಲಿ 10 ನಿಮಿಷ ವ್ಯತ್ಯಯಾಗಿರುವ ಘಟನೆ ಶನಿವಾರ ಬೆಂಗಳೂರಿನಲ್ಲಿ ನಡೆದಿದೆ.

First published:

  • 17

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಶನಿವಾರ ಮಹಾಕವಿ ಕುವೆಂಪು ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ನಾಯಿ, ಬೆಕ್ಕು, ಪಕ್ಷಿಗಳು ಮೆಟ್ರೋ ಟ್ರ್ಯಾಕ್ ಮೇಲೆ ಹೋಗಿರುವ ಘಟನೆಗಳು ನಡೆದಿದ್ದವು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಗೃಹ ರಕ್ಷಕರು ಮತ್ತು ಮೆಟ್ರೋ ನಿಲ್ದಾಣದ ಸಿಬ್ಬಂದಿ ಫ್ಲಾಟ್​​ಫಾರ್ಮ್​​​ನ ಎಚ್ಚರಿಕೆ ಹಳದಿ ಪಟ್ಟಿಯನ್ನು ದಾಟಲು ಯಾರಿಗೂ ಬಿಡಲ್ಲ. ಹಾಗಾಗಿ ಇಂತಹ ಘಟನೆಗಳು ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಇಬ್ಬರು ರೈಲು ಹಳಿಯಂತೆ ಮೆಟ್ರೋ ಟ್ರ್ಯಾಕ್ ದಾಟಲು ಮುಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಗ್ರಾಮೀಣ ಪ್ರದೇಶದಿಂದ ಬಂದ ಇಬ್ಬರು ಒಂದು ಬದಿಯ ಫ್ಲಾಟ್​​ಫಾರ್ಮ್​​ಗೆ ಬಂದಿದ್ದಾರೆ. ಈ ವೇಳೆ ತಾವು ಆ ಬದಿಗೆ ಬರಬೇಕಿತ್ತು ಅನ್ನೋದು ಗೊತ್ತಾಗಿದೆ. ಕೂಡಲೇ ಇಬ್ಬರು ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಇಬ್ಬರು ಟ್ರ್ಯಾಕ್ ಮೇಲೆ ಇಳಿಯುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಟ್ರಿಪ್ ತುರ್ತು​ ಸಿಸ್ಟಮ್ ಸಕ್ರಿಯಗೊಳಿಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ನಂತರ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಇಬ್ಬರ ವಿರುದ್ಧ ಮೆಟ್ರೋ ಸುರಕ್ಷತಾ ಕಾಯಿದೆಯ ಸೆಕ್ಷನ್ 64ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರಿಗೂ ತಲಾ 250 ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಬಿಎಂಆರ್​​​ಸಿಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಸ್.ಯಶವಂತ್ ಚವಾಣ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ 10 ನಿಮಿಷ ವ್ಯತ್ಯಯ ಉಂಟಾಗಿತ್ತು. ಈ ಸಮಯದಲ್ಲಿ ನಾಲ್ಕು ರೈಲುಗಳ ಸಂಚಾರಕ್ಕೆ ವಿಳಂಬವಾಯ್ತು ಎಂದು ಚವಾಣ್ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ

    ಮೆಟ್ರೋ ಟ್ರ್ಯಾಕ್ 750 ವಿ ಡೈರಕ್ಟ್ ಕರೆಂಟ್ ವೋಲ್ಟೇಜ್ ಅನ್ನು ಥರ್ಡ್​ ರೈಲ್, ಮೆಟ್ರೋ ರೈಲುಗಳು ಮೆಟ್ರೋ ನೆಟ್​​ವರ್ಕ್​​ನಾದ್ಯಂತ ಟ್ರ್ಯಾಕ್​ಗಳಿಗೆ ಸಮಾನಾಂತರವಾಗಿ ಚಲಿಸುತ್ತವೆ. ಟ್ರ್ಯಾಕ್​ಗಳಲ್ಲಿ ವಿದ್ಯುತ್ ಪ್ರವಹಿಸುವಿಕೆ ಇರೋದರಿಂದ ಹಳದಿ ಪಟ್ಟಿ ದಾಟಲು ಯಾರಿಗೂ ಬಿಡಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES