ಮಕರ ಸಂಕ್ರಾಂತಿ ಅಂದ್ರೆ ನದಿಗೆ ತೆರಳಿ ಪುಣ್ಯಸ್ನಾನ ಮಾಡೋದು ಸಂಪ್ರದಾಯ. ನದಿಗೆ ತೆರಳಲು ಆಗದಿದ್ದವರು ಮನೆಗಳಲ್ಲಿಯೇ ಎಣ್ಣೆ ಸ್ನಾನ ಮಾಡ್ತಾರೆ. ಆದರೆ ಶುಕ್ರವಾರ ನದಿ ಸ್ನಾನಕ್ಕೆ ತೆರಳಿದ್ದ ಗೆಳೆಯರಿಬ್ಬರು ನೀರು ಪಾಲಾಗಿದ್ದಾರೆ.
ಗಣೇಶ್ (42) ಮತ್ತು ಉದಯ್ (43) ಮೃತ ಗೆಳೆಯರು. ಹಬ್ಬದ ಹಿನ್ನೆಲೆ ಗಣೇಶ್, ಉದಯ ಸೇರಿದ ಗೆಳೆಯರ ಗುಂಪು ಪುಣ್ಯಸ್ನಾನಕ್ಕಾಗಿ ರಾಯಚೂರು ತಾಲೂಕಿನ ಶಕ್ತಿನಗರದ ಬಳಿಯ ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಜಲಸಮಾಧಿ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)
2/ 5
ಸದ್ಯ ಗಣೇಶ್ ಮೃತದೇಹ ಪತ್ತೆಯಾಗಿದ್ದು, ಉದಯ್ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಗಣೇಶ್ ನಿಜಲಿಂಗಪ್ಪ ಕಾಲೋನಿಯ ನಿವಾಸಿಯಾಗಿದ್ರೆ, ಉದಯ್ KEB ಕಾಲೋನಿಯ ನಿವಾಸಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)
3/ 5
ಮಕರ ಸಂಕ್ರಾಂತಿ ಸಂಭ್ರಮದಲ್ಲಿ ಮನೆಯಲ್ಲಿ ಸಾವಿನ ಸೂತಕದ ಛಾಯೆ ಆವರಿಸಿದೆ.ಉದಯ್ ಮತ್ತು ಗಣೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. (ಸಾಂದರ್ಭಿಕ ಚಿತ್ರ)
4/ 5
ಘಟನೆ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)
5/ 5
ಕೊರೊನಾ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನಕ್ಕೆ ನಿರ್ಬಂಧ ಹಾಕಲಾಗಿದೆ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)