Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

ಮಹಿಳೆಯನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಕ್ಯಾಬ್ ಚಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

First published:

  • 17

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ಬಳ್ಳಾರಿ ಮೂಲದ ಅಖೀಲೇಶ್ ಜಿ (25) ಮತ್ತು ಹಾಸನ ಮೂಲದ ದೀಪು ಜೆಎಲ್ (21) ಬಂಧಿತ ಆರೋಪಿಗಳು. ಇಬ್ಬರು ಕ್ಯಾಬ್ ಚಾಲಕರಾಗಿದ್ದು, ಈಜಿಪುರದಲ್ಲಿ ವಾಸವಾಗಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    25 ವರ್ಷದ ಮಹಿಳೆ ಪೂರ್ವ ಬೆಂಗಳೂರಿನ ನಿವಾಸಿಯಾಗಿದ್ದು, ಬುಧವಾರ ಸಂಜೆ ಸುಮಾರು 5 ಗಂಟೆಗೆ ಈಜಿಪುರದ 10ನೇ ಕ್ರಾಸ್‌ ಬಳಿ ನಡೆದುಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಬೈಕ್​​ನಲ್ಲಿ ಬಂದ ಇಬ್ಬರು ಮಹಿಳೆಯನ್ನು ಹಿಂಬಾಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ಇದರಿಂದ ಭಯಗೊಂಡ ಮಹಿಳೆ ರಸ್ತೆ ಬದಿ ಅಡಗಿಕೊಳ್ಳಲು ಮುಂದಾಗಿದ್ರು. ಅಲ್ಲಿಗೆ ಬಂದ ಒಬ್ಬ ಚರ್ಚ್ ಬಳಿ ಡ್ರಾಪ್ ಮಾಡೋದಾಗಿ ಹೇಳಿದ್ದಾನೆ. ಅವನ ಜೊತೆ ತೆರಳಲು ಒಪ್ಪದಿದ್ದಾಗ ಮಹಿಳೆಯನ್ನು ಬೈಕ್​​ನಲ್ಲಿ ಅಪಹರಿಸಿ ಕರೆದುಕೊಂಡು ಹೋಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹುಸ್ಕೂರ ಬಳಿಯ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಇಬ್ಬರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರಿಂದ ತಪ್ಪಿಸಿಕೊಂಡ ಮಹಿಳೆ ಅಲ್ಲಿಯೇ ಇದ್ದ ಪೊದೆಗಳಲ್ಲಿ ಅಡಗಿಕೊಂಡು ರಾತ್ರಿ ಕಳೆದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ನಂತರ ಸ್ಥಳೀಯರ ಸಹಾಯ ಪಡೆದು ಬಟ್ಟೆ ಬದಲಾಯಿಸಿಕೊಂಡು ಗುರುವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ಆರ್ ಅವರು ಆರೋಪಿಗಳನ್ನು ಬಂಧಿಸಲು ಇನ್ಸ್‌ಪೆಕ್ಟರ್ ಕೆ ಕಾಂತರಾಜ್ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

    ಅದೇ ದಿನ ಇಬ್ಬರು ಆರೋಪಿಗಳ ಬಂಧನವಾಗಿದೆ. ಸದ್ಯ ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES