ದಸರಾ ಸಂಭ್ರಮ: ಆಯುಧ ಪೂಜೆಯಂದು ಸಾರಿಗೆ ಬಸ್ಗಳಿಗೆ ಪೂಜೆಗೆ ಸಚಿವರ ಆದೇಶ
ಆಯುಧ ಪೂಜೆಯಂದು ವಾಹನಗಳನ್ನು ಪೂಜಿಸುವುದು ವಾಡಿಕೆ. ಅದರಂತೆ ಈ ಬಾರಿ ಕೂಡ ಆಯುಧ ಪೂಜೆಯಂದು ರಾಜ್ಯ ಸರ್ಕಾರದ ಬಸ್ಸುಗಳನ್ನು ಸಂಪ್ರದಾಯದಂತೆ ಪೂಜೆ ಮಾಡುವಂತೆ ಆದೇಶ ಹೊರಡಿಸಿ ಸಾರಿಗೆ ಸಚಿವ ಶ್ರೀರಾಮುಲು ಆದೇಶ ಹೊರಡಿಸಿದ್ದಾರೆ.
ಆಯುಧ ಪೂಜೆಯಂದು ನಿಗಮಗಳ ಪ್ರಯಾಣಿಕ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸುವಂತೆ ಅವರು ಸೂಚನೆ ನೀಡಿದ್ದಾರೆ.
2/ 5
ಆಯುಧ ಪೂಜೆಯಂದು ನಡೆಸುವ ಬಸ್ಗಳ ಪೂಜೆಗೆ ಪ್ರತಿ ವಾಹನ ಪೂಜೆಗೆ 100 ರೂ ಮತ್ತು ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ ಮುಂಗಡ ನಗದು ಪಡೆದು ಈ ಪೂಜಾ ಕಾರ್ಯಕ್ಕೆ ಎಂದಿನಂತೆ ವಿನಿಯೋಗಿಸುವಂತೆ ಆದೇಶ ಹೊರಡಿಸಿದ್ದಾರೆ.
3/ 5
ದಸರಾ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಬಸ್ ಗಳನ್ನೂ ಸಹ ಈ ಸಂದರ್ಭದಲ್ಲಿ ನವವಧುವನಿಂತೆ ಸಿಂಗರಿಸಿ ಪೂಜೆ ಮಾಡುವುದು ಮೊದಲಿನಂದಲೂ ಬಂದಿದೆ.
4/ 5
ಬಿಎಂಟಿಸಿಯಲ್ಲಿ 6,500 ಬಸ್ ಗಳು, ಕೆಎಸ್ ಯಲ್ಲಿ 8000 ಬಸ್ ಗಳು ಸೇರಿ ಎಲ್ಲಾ ನಿಗಮಗಳಿಂದ ಒಟ್ಟು 24 ಸಾವಿರ ಬಸ್ ಗಳಿವೆ. ಎಲ್ಲಾ ಬಸ್ಗಳಿಗೂ ಪೂಜೆ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಜೊತೆಗೆ ಯಂತ್ರೋಪಕರಣಕ್ಕೂ ಪೂಜೆ ಸಲ್ಲಿಸಲಾಗುವುದು
5/ 5
ಈಗಾಗಲೇ ನಷ್ಟದಲ್ಲಿರುವ ಸಾರಿಗೆ ಇಲಾಖೆ ಬಸ್ ಅಲಂಕಾರಕ್ಕೆ 100 ರೂ ಮಾತ್ರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಬಸ್ ಸಿಂಗಾರಿಸುವುದು ಅಸಾಧ್ಯ. ಈ ಹಿನ್ನಲೆ ಬಸ್ ನಿರ್ವಹಕರು ಮತ್ತು ಚಾಲಕರೇ ತಮ್ಮ ಕಿಸೆಯಿಂದ ಹಣ ಸೇರಿಸಿ ಅಲಂಕಾರ ಮಾಡುವುದು ಅನಿವಾರ್ಯವಾಗಲಿದೆ