PHOTOS: ಬಿಬಿಎಂಪಿ ನಿರ್ಲಕ್ಷ್ಯ; ನಗರದಾದ್ಯಂತ 300 ರಸ್ತೆ ಗುಂಡಿ ಮುಚ್ಚಿಸಿದ ಟ್ರಾಫಿಕ್ ಪೊಲೀಸರು
ಬಿಬಿಎಂಪಿಯಿಂದ ಆಗದ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿ ತೋರಿಸಿದ್ದಾರೆ. ನಗರದಾದ್ಯಂತ 300ಕ್ಕೂ ಹೆಚ್ಚು ಗುಂಡಿಗಳನ್ನು ಸಂಚಾರಿ ಪೊಲೀಸರು ಮುಚ್ಚಿದ್ದಾರೆ. ಸಿಮೆಂಟ್ ಹಾಗೂ ಡಾಂಬರ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಗರದ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಿದ್ದಾರೆ. ಮಳೆ ಆರಂಭಕ್ಕೂ ಮುನ್ನವೇ ಗುಂಡಿ ಮುಚ್ಚಿ ಸಂಚಾರಕ್ಕೆ ಅಡಚಣೆಯಾಗದಂತೆ ಗಮನ ಹರಿಸಿದ್ದಾರೆ. ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸದಾ ನಿರ್ಲಕ್ಷ್ಯ ತೋರುತ್ತಿದೆ. ರಸ್ತೆ ಗುಂಡಿಗಳಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಖುದ್ದು ರಸ್ತೆಗಿಳಿದು ಗುಂಡಿ ಮುಚ್ಚಿಸಲು ಮುಂದಾಗಿದ್ದಾರೆ.