Traffic Restriction: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಾಳೆ ಸಂಚಾರ ನಿರ್ಬಂಧ! ಎಲ್ಲೆಲ್ಲಿ?
ಬೆಂಗಳೂರಲ್ಲಿ ವೀಕೆಂಡ್ ಅಂದ್ರೆ ಸಾಕು ಜನರು ಪಾರ್ಟಿ, ಶಾಪಿಂಗ್ ಅಂತ ಫುಲ್ ಎಂಜಾಯ್ ಮಾಡುವ ಮೂಡ್ ನಲ್ಲಿ ಇರ್ತಾರೆ. ನಾಳೆ ಹೊರಗೆ ಹೋಗುವ ಮುನ್ನ ಸ್ವಲ್ಪ ಯೋಚಿಸಿ, ಯಾಕಂದ್ರೆ ಹಲವೆಡೆ ರಸ್ತೆಗಳ ಬಂದ್ ಆಗಲಿವೆ
ನಾಳೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 61ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮ್ಯಾರಥಾನ್ ಆಯೋಜಿಸಲಾಗಿದ್ದು, ಇದರಿಂದ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 4 ರಿಂದ 11 ಗಂಟೆಯವರೆಗೂ ಎಲ್ಲಾ ವಿಧದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
2/ 7
ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ ಎನ್ನುವುದನ್ನು ತಿಳಿಕೊಳ್ಳಿ. ವೀಕೆಂಡ್ ಪ್ಲಾನ್ ಮಾಡಲು ಅನುಕೂಲವಾಗಲಿದೆ.
3/ 7
ಕಸ್ತೂರಬಾ ರಸ್ತೆಯ ಹಡ್ಸನ್ ಸರ್ಕಲ್ ನಿಂದ ಸಿದ್ಧಲಿಂಗಯ್ಯ ಜಂಕ್ಷನ್ವರೆಗೆ ಸಂಚಾರ ಬಂದ್ ಆಗಲಿದೆ.
4/ 7
ಅಂಬೇಡ್ಕರ್ ರಸ್ತೆಯ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್ವರೆಗೆ ಹಾಗೂ ರಾಜಭವನ ರಸ್ತೆಯ ಸಿಟಿಓ ಸರ್ಕಲ್ ನಿಂದ ತಿಮ್ಮಯ್ಯ ಜಂಕ್ಷನ್ವರೆಗೆ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
5/ 7
ಕ್ವೀನ್ಸ್ ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ಸಿಟಿಓ ಸರ್ಕಲ್ವರೆಗೆ ಹಾಗೂ ಎಂ.ಜಿ ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ವೆಬ್ಸ್ ಜಂಕ್ಷನ್ವರೆಗೆ ಸಂಚಾರ ಬಂದ್ ಆಗಲಿದೆ.
6/ 7
ಸಿದ್ಧಲಿಂಗಯ್ಯ ಜಂಕ್ಷನ್ ನಿಂದ ಕ್ವೀನ್ಸ್ ಸರ್ಕಲ್ ವರೆಗೆ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
7/ 7
ನಾಳೆ ಹಲವೆಡೆ ಸಂಚಾರ ಬದಲಾವಣೆ ಮಾಡಲಾಗಿದ್ದು, ಬದಲಿ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
First published:
17