ವಾರಾಂತ್ಯವಾಗಿದ್ದ ಕಾರಣ ನಿನ್ನೆ ಭಾನುವಾರ ತಿರುಮಲ ತಿರುಮಲದಲ್ಲಿ (Tirumala) ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಂದ (Devotees) 21 ಕಂಪಾರ್ಟ್ಮೆಂಟ್ಗಳು (Compartments) ತುಂಬಿದ್ದವು. ಟೋಕನ್ (Tokens) ಇಲ್ಲದ ಭಕ್ತರಿಗೆ 30 ಗಂಟೆಯೊಳಗೆ ಸರ್ವದರ್ಶನ (Sarvadarsan) ದೊರೆಯಲಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಭಕ್ತರ ಮನವಿಯ ಮೇರೆಗೆ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಗಾಳಿಗೋಪುರದ ಹಾಗೂ ಶ್ರೀವಾರಿ ಮೆಟ್ಟಿಲು ಮಾರ್ಗದ 1250ನೇ ಮೆಟ್ಟಿಲ ಬಳಿ ದಿವ್ಯದರ್ಶನ ಟೋಕನ್ ನೀಡಲಾಗುತ್ತಿದೆ. ಭಕ್ತರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ನೇರವಾಗಿ ಹಾಜರಾದರೆ ಮಾತ್ರ ಟೋಕನ್ ನೀಡಲಾಗುವುದು ಎಂದು ವಿವರಿಸಲಾಗಿದೆ. ದಿವ್ಯದರ್ಶನ ಟೋಕನ್‌ಗಳ ವಿತರಣೆಯನ್ನು ಕೆಲವು ದಿನಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸುವುದಾಗಿ ಟಿಟಿಡಿ ಸ್ಪಷ್ಟಪಡಿಸಿದೆ. (ಸಾಂದರ್ಭಿಕ ಚಿತ್ರ)
ಇನ್ನು, ಅಲಿಪಿರಿ ಮಾರ್ಗದಲ್ಲಿ ಬರುವ ಭಕ್ತಿರಿಗೆ ಪ್ರತಿದಿನ 10 ಸಾವಿರ ಟಿಕೆಟ್ ಮತ್ತು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಬರುವ ಭಕ್ತರಿಗೆ ಪ್ರಾಯೋಗಿಕವಾಗಿ ಪ್ರತಿದಿನ 5 ಸಾವಿರ ಟೋಕನ್ ನೀಡಲಾಗುತ್ತಿದೆ. 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು ಮತ್ತು ಸೇವಾ ಟಿಕೆಟ್‌ಗಳನ್ನು ಪಡೆದ ಭಕ್ತರಿಗೆ ಕಾಲ್ನಡಿಗೆ ಮಾರ್ಗದ ದರ್ಶನದ ಟೋಕನ್‌ಗಳನ್ನು ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)