Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಕಲಬುರಗಿಯಲ್ಲಿ ಓರ್ವ ರೈತ ಸಾವನ್ನಪ್ಪಿದ್ದಾರೆ.

First published:

  • 17

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ರಾಜ್ಯದ ಕೊಪ್ಪಳ, ಗದಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇಂದು ಆಲಿಕಲ್ಲು ಸಮೇತ ಭಾರೀ ಮಳೆಯಾಗಿದೆ. ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಕಲಬುರಗಿಯಲ್ಲಿ ಓರ್ವ ರೈತ ಸಾವನ್ನಪ್ಪಿದ್ದಾರೆ.

    MORE
    GALLERIES

  • 27

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಗದಗ ತಾಲೂಕಿನ ಲಿಂಗಧಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತರನ್ನು ಶರಣಪ್ಪ (20), ದೇವೇಂದ್ರಪ್ಪ (16) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಸುನೀಲ್​ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ಆತನನ್ನು ಜಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಯುವಕರು ಕುರಿಗಳ ಮೇಯಿಸಲು ಹೋಗ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    MORE
    GALLERIES

  • 37

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ. ಗ್ರಾಮದ ಭೋಗಪ್ಪ ಆಲೆನವರ್ (60) ಮೃತ ದುರ್ದೈವಿಯಾಗಿದ್ದಾರೆ.

    MORE
    GALLERIES

  • 47

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮದ ಸುತ್ತಮುತ್ತ ಹಿಮಪಾತದಂತೆ ಆಲಿಕಲ್ಲು ಮಳೆಯಾಗಿದ್ದು, ರೈತರಿಗೆ ಭಾರೀ ನಷ್ಟ ಎದುರಾಗಿದೆ. ಮನೆಯ ಮೇಲೆ ರಾಶಿ ರಾಶಿ ಆಲಿಕಲ್ಲು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ರೀತಿ ಯಾವತ್ತು ಆಲಿಕಲ್ಲು ಮಳೆ ಆಗಿರಲಿಲ್ಲ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಗದಗ ಜಿಲ್ಲೆಯ ಹೊಳೆಆಲೂರಿನ ನವ ಗ್ರಾಮದಲ್ಲಿ ಸಿಡಿಲಿಗೆ ರಸ್ತೆ ಪಕ್ಕದಲ್ಲಿ ನಿರ್ಮಿಸಿದ್ದ ಅಂಗಡಿ ಹೊತ್ತಿ ಉರಿದಿದೆ. ಕೃಷ್ಣಾ ಗಂಗಪ್ಪ ಲಮಾಣಿ ಎಂಬವರು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದು ಮಳೆ ಸುರಿದ ಸಂದರ್ಭದಲ್ಲಿ ಅಂಗಡಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಗೊಂಡ ಪರಿಣಾಮ ಭಾರೀ ನಷ್ಟ ಎದುರಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅಂಗಡಿಯಲ್ಲಿ ಯಾರು ಇಲ್ಲದ ಕಾರಣ ದುರಂತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    MORE
    GALLERIES

  • 67

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಕೊಪ್ಪಳ ಜಿಲ್ಲೆಯ ವಿವಿಧೆಡೆ ಜಿಲ್ಲೆಯಲ್ಲಿ ಮೊದಲ ವರ್ಷಧಾರೆಯಾಗಿದ್ದು, ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಭೀಮಾಂಬಿಕ ದೇವಸ್ಥಾನದ ಆವರಣದಲ್ಲಿನ ತೆಂಗಿನ ಮರದಲ್ಲಿ ಸಿಡಿಲು ಬಡಿದ ಕಾರಣ ಹೊತ್ತಿ ಉರಿದಿದೆ. ಇನ್ನು, ಕೊಪ್ಪಳ ತಾಲೂಕಿನ ಓಜನಳ್ಳಿಯಲ್ಲಿ ಸಿಡಿಲು ಬಡಿದು ಶಿವಪುತ್ರಪ್ಪ ತಳಕಲ್ಲು ಎಂಬುವವರಿಗೆ ಸೇರಿದ‌ ಎತ್ತು ಸಾವನ್ನಪ್ಪಿದೆ.

    MORE
    GALLERIES

  • 77

    Karnataka Rains: ಸಿಡಿಲು ಬಡಿದು ಮೂವರು ಸಾವು, ಗದಗದಲ್ಲಿ ಹಿಮಪಾತದಂತೆ ಸುರಿದ ಆಲಿಕಲ್ಲು ಮಳೆ!

    ಇನ್ನು, ವಿಜಯನಗರ ಜಿಲ್ಲೆಯಲ್ಲಿ ಇಂದು ಮೊದಲ ಮಳೆಯ ಸಿಂಚನವಾಗಿದೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿ ಸಿಡಿಲಿನಿಂದ ಪಾರಾಗಿದ್ದಾರೆ. ಹೊಸಪೇಟೆಯಲ್ಲಿ ಬೆಳಗ್ಗೆಯಿಂದ ಜಿಟಿ, ಜಿಟಿ ಮಳೆಯಾಗುತ್ತಿದ್ದು, ಚೆಕ್​ಪೋಸ್ಟ್​ ಸಮೀಪದಲ್ಲಿದ್ದ ತೆಂಗಿನ ಮರಕ್ಕೆ ಬಡಿದ ಸಿಡಿಲು ಬೆಂಕಿ ಹೊತ್ತಿಕೊಂಡಿದೆ. ಸಿಡಿಲಿನ ಶಬ್ದಕ್ಕೆ ಚೆಕ್ ಪೋಸ್ಟ್ ಸಿಬ್ಬಂದಿ ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದರು

    MORE
    GALLERIES