Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

Bengaluru Accident: ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ಟೆಂಪೋ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

First published:

 • 16

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಕಾಫಿ ಬೋರ್ಡ್ ಮುಂಭಾಗದ ಸರ್ಕಲ್​ನಲ್ಲಿ ಅಪಘಾತ ಸಂಭವಿಸಿದೆ. ಚಾಲಕರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  MORE
  GALLERIES

 • 26

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಟೆಂಪೋ ಪಬ್ ಮತ್ತು ಬಾರ್​​ಗಳಿಂದ ತ್ಯಾಜ್ಯ ಸಂಗ್ರಹಿಸಿ ಸಾಗುತ್ತಿತ್ತು. ಈ ವೇಳೆ ಕಾರ್ ಮತ್ತು ಟೆಂಪೋ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

  MORE
  GALLERIES

 • 36

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಕೆಎ 04 ಎಂಪಿ 2949 ಸಂಖ್ಯೆಯ ಕಾರ್ ಸಂಪೂರ್ಣ ಜಖಂ ಆಗಿದೆ. ಇತ್ತ ಕಸ ತುಂಬಿದ ಟೆಂಪೋ ಪಲ್ಟಿಯಾಗಿದೆ. ಟೆಂಪೋ ಪಲ್ಟಿಯಾದ ಪರಿಣಾಮ ರಸ್ತೆ ತುಂಬೆಲ್ಲಾ ಕಸ ಮತ್ತು ಮದ್ಯದ ಬಾಟೆಲ್​ಗಳು ಚೆಲ್ಲಾಪಿಲ್ಲಿಯಾಗಿವೆ.

  MORE
  GALLERIES

 • 46

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಅಪಘಾತದ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಕಬ್ಬನ್ ಪಾರ್ಕ್ ಠಾಣೆಯ ಸಂಚಾರಿ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ರಸ್ತೆ ತುಂಬೆಲ್ಲಾ ಹರಡಿರುವ ಕಸವನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.

  MORE
  GALLERIES

 • 56

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಕೊನೆಗೆ ಮತ್ತೊಂದು ಟೆಂಪೋ ವಾಹನ ಕರೆಸಿರುವ ಪೊಲೀಸರು ಕಸ ತೆರವುಗೊಳಿಸಿದ್ದಾರೆ. ಪ್ರಮುಖ ರಸ್ತೆಯಾಗಿರುವ ಕಾರಣ ಬೆಳಗ್ಗೆ ವೇಳೆ ಸುಗಮ ರಸ್ತೆ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ.

  MORE
  GALLERIES

 • 66

  Accident: ಟೆಂಪೋ, ಕಾರ್ ಮುಖಾಮುಖಿ ಡಿಕ್ಕಿ; ಚಾಲಕರು ಗಂಭೀರ

  ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ಮೂವರ ಗುರುತು ಪತ್ತೆಯಾಗಿಲ್ಲ. ಅಪಘಾತಕ್ಕೂ ನಿಖರ ಕಾರಣ ತಿಳಿದು ಬಂದಿಲ್ಲ.

  MORE
  GALLERIES