ಸಭೆ ಬಳಿಕ ಮಾತಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಮಧ್ಯರಾತ್ರಿ ರಾತ್ರಿ ಲೈಟ್ ಆಫ್ ಮಾಡದಂತೆ ವಿಶೇಷ ಸೂಚನೆ ನೀಡಲಾಗಿದೆ. 2019 ಕೋವಿಡ್ ನಂತರ ಹೊಸ ವರ್ಷಾಚರಣೆ ನಡೆಯುತ್ತಿದೆ. ಡಿಸೆಂಬರ್ 31 ರಂದು ಎಲ್ಲಾ ಭದ್ರತಾ ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ರು.
2/ 8
ಎಲ್ಲಾ ಪಬ್ ಹಾಗೂ ರೆಸ್ಟೋರೆಂಟ್ ನವರು ಸಹ ಹಲವು ಪ್ಲಾನ್ ಮಾಡಿಕೊಂಡಿದ್ದಾರೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾವ ರೀತಿ ಸೇಫ್ಟಿ ತೆಗೆದುಕೊಳ್ಳುಬೇಕು ಅಂತ ಹೇಳಿದ್ದೀವಿ ಎಂದ್ರು.
3/ 8
ಪಬ್ ಹಾಗೂ ರೆಸ್ಟೋರೆಂಟ್ ನವರು ಸಹ ಕೆಲ ಫೀಡ್ ಬ್ಯಾಕ್ ಕೊಟ್ಟಿದ್ದಾರೆ. ಅದನ್ನು ಸಹ ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಸಿಸಿಟಿವಿ ಆಳವಡಿಸೋದಕ್ಕೆ ಹೇಳಿದ್ದೀವಿ. ಅಪ್ರಾಪ್ತ ಬಂದರೆ ಅದರ ಬಗ್ಗೆ ಸಹ ಗಮನ ಕೊಡಲು ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದ್ರು.
4/ 8
ಮಹಿಳೆಯರಿಗೆ ಹೆಚ್ಚಿನ ಭದ್ರತೆ ಕೊಡಬೇಕು ಅಂತಲು ಸಹ ಹೇಳಿದ್ದೇವೆ. ಟೆಂಪರರಿ ಕೆಲಸಗಾರರನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಕೆಲಸಗಾರರ ಬಗ್ಗೆ ಪೂರ್ವಾಪರ ವಿಚಾರಿಸಲು ಹೇಳಿದ್ದೀವಿ. ಕ್ರಿಮಿನಲ್ ಹಿನ್ನೆಲೆ ಇದ್ದರೆ ಅಂತವರನ್ನು ಕೆಲಸಕ್ಕೆ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದೇವೆ.
5/ 8
ಟ್ರಾಫಿಕ್ ಬಗ್ಗೆ ಸಹ ಪ್ಲ್ಯಾನ್ ಮಾಡಿದ್ದೀವಿ. ಓವರ್ ಕ್ರೌಡಿಂಗ್ ಬಗ್ಗೆ ಸಹ ನೋಡಿಕೊಳ್ಳಲು ಹೇಳಿದ್ದೀವಿ. ಜನರ ನಿಯಂತ್ರಣಕ್ಕೆ ಮತ್ತು ವಿದ್ಯುತ್ ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸೋದಕ್ಕೆ ಸೂಚನೆ ಕೊಟ್ಟಿದ್ದೀವಿ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
6/ 8
ಹೊಸವರ್ಷದ ಸೆಲೆಬ್ರೇಷನ್ ಬಗ್ಗೆ ಮಂಜಾಗೃತೆ ಕ್ರಮದ ಬಗ್ಗೆ ಚರ್ಚೆಯಾಗಿದೆ. ಕ್ಲಬ್ ಗೆ ಮಾತ್ರ ಟೈಂ ರಿಸ್ಟ್ರಿಕ್ಷನ್ ಇರುತ್ತೆ ರಸ್ತೆಯಲ್ಲಿ ಯಾವುದೇ ರಿಸ್ಟ್ರಿಕ್ಷನ್ ಇಲ್ಲ ಎಂದು ಬ್ರಿಗೆಡ್ ಸ್ಟೋರ್ಸ್ ಅಂಡ್ ಎಸ್ಟಾಬ್ಲಿಷಿಮೆಂಟ್ ಅಸೋಸಿಯೇಷನ್ ಸೆಕ್ರೆಟರಿ ಸುಹೇಲ್ ಯೂಸೂಫ್ ಹೇಳಿದ್ದಾರೆ.
7/ 8
ಎಲ್ಲರ ಸೇಫ್ಟಿಗೊಸ್ಕರ ನಾವು ಫುಲ್ ಲೈಟಿಂಗ್ ಮಾಡುತ್ತೇವೆ. ಲೈಟಿಂಗ್ ಆಫ್ ಮಾಡದಂತೆ ಪೊಲೀಸರು ತಿಳಿಸಿದ್ದಾರೆ ನಾವು ಕೂಡ ಒಪ್ಪಿದ್ದೇವೆ ಎಂದು ಸುಹೇಲ್ ಯೂಸೂಫ್ ಹೇಳಿದ್ದಾರೆ.
8/ 8
ಪೊಲೀಸರು ಕೆಲವೊಂದು ಸಲಹೆ ನೀಡಿದ್ದಾರೆ. ನಾವು ಕೂಡ ಅವರಿಗೆ ಸಲಹೆ ನೀಡಿದ್ದೀವಿ. ಜನರ ಓಡಾಟಕ್ಕೂ ಕೂಡ ಓನ್ ವೇ ಮಾಡಿಕೊಡುವಂತೆ ತಿಳಿಸಿದ್ದೇವೆ. ಸರ್ಕಾರ ಇನ್ನೂ ಸೆಲೆಬ್ರೇಷನ್ ಟೈಮ್ ನಿಗದಿ ಮಾಡಿಲ್ಲ ನಿಗದಿಯಾದ ನಂತರ ಟೈಮಿಂಗ್ ತಿಳಿಯಲಿದೆ ಎಂದು ಹೇಳಿದ್ರು.