Rain Update: ವಾರಾಂತ್ಯದಲ್ಲಿ ಜೋರಾಗಲಿದೆ ಮಳೆಯ ಅಬ್ಬರ; ಹವಾಮಾನ ಇಲಾಖೆ ಎಚ್ಚರಿಕೆ
ರಾಜ್ಯಾದ್ಯಂತ ವಾರಾಂತ್ಯದಲ್ಲಿ ಮಳೆ (Rain) ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ (Sadananda Gowda) ಹೇಳಿದ್ದಾರೆ. ಕರಾವಳಿಯಲ್ಲಿ ಏಪ್ರಿಲ್ 21ರವರೆಗೂ ಮಳೆ ಇರಲಿದೆ. 22, 23ರಂದು ಮಳೆ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. ಇಂದು ಮತ್ತು ನಾಳೆಗೆ ಸಿಡಿಲು, ಗುಡುಗಿನ ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮಳೆ ಮುಂದುವರಿದಿದೆ. ನಗರದ ಹಲವೆಡೆ ಮಳೆಯಾಗ್ತಿದ್ದು, ಹಲವೆಡೆ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದೆ. ಮೂರು ದಿನಗಳಿಂದ ಸುರೀತಿರೋ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.
2/ 7
ಸಂಜೆಯಾದ್ರೆ ಸುರಿಯೋ ಮಳೆಯಿಂದ ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವಾಗ ಈಗ ಮಳೆಯ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ.
3/ 7
ರಾಜ್ಯಾದ್ಯಂತ ವಾರಾಂತ್ಯದಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ.
4/ 7
ನಿನ್ನೆವರೆಗೂ ಇದ್ದ ಅರಬ್ಬೀ ಸಮುದ್ರದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
5/ 7
ಕರಾವಳಿಯಲ್ಲಿ ಏಪ್ರಿಲ್ 21ರವರೆಗೂ ಮಳೆ ಇರಲಿದೆ. 22, 23ರಂದು ಮಳೆ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. ಇಂದು ಮತ್ತು ನಾಳೆಗೆ ಸಿಡಿಲು, ಗುಡುಗಿನ ಮುನ್ನೆಚ್ಚರಿಕೆ ನೀಡಲಾಗಿದೆ.
6/ 7
ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಕೆಲವೆಡೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿಯೂ ಮಳೆ ಮುಂದುವರಿಯಲಿದೆ.
7/ 7
ಇಂದು ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯಾರ್ಭಟ ಮುಂದುವರಿಯಲಿದೆ. ನಾಳೆ ಮೋಡ ಕವಿದ ವಾತಾವರಣವಿದ್ದು, ಮಳೆ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.