Cigarette Ban: 'ಹೊಗೆ' ಬಿಡೋರಿಗೆ ಶಾಕ್ ಕೊಡಲು ಹೊಸ ರೂಲ್ಸ್! ಇನ್ಮುಂದೆ ಅಂಗಡಿಯಲ್ಲಿ ಸಿಗಲ್ವಂತೆ ಸಿಂಗಲ್ ಸಿಗರೇಟ್!
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಚಾರ ಗೊತ್ತಿದ್ದರು ಜನರು ಬಿಡಿ, ಸಿಗರೇಟ್ ಸೇದುವುದನ್ನು ಬಿಡುವುದಿಲ್ಲ. ಇದ್ರಿಂದ ಸಾವಿರಾರು ಜನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ತಂಬಾಕು ಕ್ಯಾನ್ಸರ್ಗೆ ಕಾರಣವಾಗುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಬೀಡಿ ಸಿಗರೇಟ್ ಗಳ ಮಾರಾಟವನ್ನು ನಿಷೇಧಿಸಲು ಸಂಸತ್ತು ಮುಂದಾಗುವ ಸಾಧ್ಯತೆ ಇದೆ.
2/ 8
ದೇಶದಾದ್ಯಂತ ತಂಬಾಕು ಮಾರಾಟವನ್ನು ಕಡಿಮೆ ಮಾಡಲು ಸಂಸತ್ನ ಸ್ಥಾಯಿ ಸಮಿತಿಯು ಕೆಲವು ಕ್ರಮಗಳನ್ನು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
3/ 8
ಗ್ರಾಹಕ ಪೂರ್ಣ ಪ್ಯಾಕ್ ಖರೀದಿಸುವ ಸಾಧ್ಯತೆ ಕಡಿಮೆ ಎಂಬ ಕಲ್ಪನೆಯಲ್ಲಿ ಅಂಗಡಿಯಲ್ಲಿ ಸಿಂಗಲ್ ಬೀಡಿ , ಸಿಗರೇಟ್ ಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರುವ ಸಾಧ್ಯತೆ ಹೆಚ್ಚಾಗಿದೆ.
4/ 8
ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿನ ಧೂಮಪಾನ ವಲಯಗಳನ್ನು (ಸ್ಮೋಕಿಂಗ್ ಝೋನ್) ಕೂಡ ತೆಗೆದುಹಾಕುವಂತೆ ಸಮಿತಿ ಶಿಫಾರಸು ಮಾಡಿದೆಯಂತೆ.
5/ 8
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದ ಬಳಿಕವೂ ತಂಬಾಕು ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲಿನ ತೆರಿಗೆ ಬಹಳ ಕಡಿಮೆ ಇದೆ. ಹೀಗಾಗಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
6/ 8
ತಂಬಾಕು ಮಾರಾಟ ಹಾಗೂ ಬಳಕೆ ಮೇಲೆ ಭಾರತದಲ್ಲಿ ಅನೇಕ ನಿರ್ಬಂಧಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
7/ 8
ಯಾವುದೇ ತಂಬಾಕು ಸಂಬಂಧಿ ಉತ್ಪನ್ನಗಳ ಜಾಹೀರಾತಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.
8/ 8
ಮೂರು ವರ್ಷದ ಹಿಂದೆ ಆರೋಗ್ಯ ಸಚಿವಾಲಯದ ಶಿಫಾರಸಿನಂತೆ ಇ- ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿತ್ತು.