ಮಂಗಳವಾರದಿಂದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಡೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾಮಗಾರಿ ಪೂರ್ಣ ಮಾಡದೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸರ್ವಿಸ್ ರಸ್ತೆಯನ್ನು ಸಹ ಬಿಟ್ಟಿಲ್ಲ ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
2/ 7
ಮತ್ತೊಂದು ಕಡೆ ಟೋಲ್ ಸಂಗ್ರಹ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಪ್ರಯಾಣದರವನ್ನು ಕೆಎಸ್ಆರ್ಟಿಸಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
3/ 7
ರಾಮನಗರ ಕಡೆಯಿಂದ ಬಿಡದಿ ಬೈಪಾಸ್ ರಸ್ತೆ ಮುಕ್ತಾಯದ ಜಾಗದಲ್ಲಿ ಸೇತುವೆಯೊಂದು ನಿರ್ಮಾಣ ಮಾಡಲಾಗಿದೆ. ಸೇತುವೆ ಆರಂಭದಲ್ಲಿ ರಸ್ತೆ ಕಿತ್ತು ಬಂದಿದೆ.
4/ 7
ರಸ್ತೆ ಕಿತ್ತು ಬಂದ ಹಿನ್ನೆಲೆ ದುರಸ್ತಿ ಕಾರ್ಯ ಆರಂಭಗೊಂಡಿದೆ. ರಸ್ತೆಯಲ್ಲಿ ಡಾಂಬಾರು ಕಿತ್ತು ಬಂದಿದ್ದು ಜಲ್ಲಿ ಕಲ್ಲುಗಳು ಹೊರ ಬಂದಿವೆ.
5/ 7
ರಸ್ತೆಯ ಬದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ರಸ್ತೆಯ ಅರ್ಧಭಾಗದಲ್ಲಿ ವಾಹನಗಳು ಚಲಿಸುತ್ತಿವೆ.
6/ 7
ಇದೇ ಸ್ಥಳದಲ್ಲಿ ಲಾರಿಯೊಂದು ಪಲ್ಟಿಯಾಗಿದೆ. ಅನೇಕ ವಾಹನಗಳು ಸ್ಕಿಡ್ ಆಗಿವೆ ಎಂದು ವರದಿಯಾಗಿದೆ. ಕೆಎಸ್ಆರ್ಟಿಸಿ ವೋಲ್ವೋ ಬಸ್ ಸಹ ಸೇರಿದಂತೆ ಹಲವು ವಾಹನಗಳು ಸ್ಕಿಡ್ ಆಗಿವೆ.
7/ 7
ಒಂದು ಬೆಂಗಳೂರಿನಿಂದ ನಿಡಘಟ್ಟ ಮತ್ತು ಇನ್ನೊಂದು ನಿಡಘಟ್ಟದಿಂದ ಮೈಸೂರಿಗೆ ಅಂತ ಹೇಳಬಹುದು. ಈ ವಿಸ್ತರಣೆಯಲ್ಲಿ, 52 ಕಿಲೋ ಮೀಟರ್ ಐದು ಬೈಪಾಸ್ ಗಳನ್ನು ಒಳಗೊಂಡಿದೆ.
First published:
17
Bengaluru-Mysuru Expressway: ಕಿತ್ತುಕೊಂಡ ಬಂದ ಪ್ರಧಾನಿ ಮೋದಿ ಉದ್ಘಾಟಿಸಿದ್ದ ದಶಪಥ ಹೆದ್ದಾರಿ