ಮಂಗಳೂರಿನ ಗುರುಪ್ರಾ ತಾಲೂಕಿನ ಮಳಲಿ ಮಾರ್ಕೆಟ್ ಆವರಣದಲ್ಲಿ ಈ ಮಸೀದಿ ಇದೆ. ಏಪ್ರಿಲ್ 21 ರಂದು ಮಸೀದಿ ನವೀಕರಣ ವೇಳೆ ಹಿಂದೂ ದೇವಾಲಯದ ವಾಸ್ತು ವಿನ್ಯಾಸ ಇರೋದು ಬೆಳಕಿಗೆ ಬಂದಿದೆ.
2/ 8
ಮಸೀದಿಯ ಆಡಳಿತ ಮಂಡಳಿ ನವೀನ ಕಾರ್ಯ ನಡೆಸುತ್ತಿದೆ. ಈಗಾಗಲೇ ಮಸೀದಿಯ ಒಂದು ಭಾಗವನ್ನು ಕೆಡವಲಾಗಿದೆ.
3/ 8
ಮಸೀದಿ ನಿರ್ಮಾಣಕ್ಕೂ ಮೊದಲು ಇಲ್ಲಿ ದೇವಸ್ಥಾನ ಇತ್ತು. ದಾಖಲೆಗಳ ಪರಿಶೀಲನೆ ಆಗೋವರೆಗೆ ಮಸೀದಿಯ ನವೀಕರಣ ನಡೆಸಬಾರದು ಎಂದು ಹಿಂದೂ ಪರಿಷತ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
4/ 8
ಮಸೀದಿ ನವೀಕರಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ಪೂಜೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ.
5/ 8
ಗಂಜಿಮಠದ ನಿವಾಸಿಯಾದ ಧನಂಜಯ್ ಎಂಬವರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಮಸೀದಿ ಒಳಗೆ ಪತ್ತೆಯಾಗಿರುವ ಪುರಾತನ ಶೈಲಿಯ ಕಟ್ಟಡ ರಕ್ಷಿಸಲು ಮನವಿ ಮಾಡಿಕೊಂಡಿದ್ದಾರೆ.
6/ 8
ಅರ್ಜಿಯ ವಿಚಾರಣೆ ನಡೆಸಿರುವ ಮಂಗಳೂರು ನ್ಯಾಯಾಲಯ, ಮುಂದಿನ ವಿಚಾರಣೆ ದಿನಾಂಕದವರೆಗೂ ಕಟ್ಟಡದಲ್ಲಿ ಯಾವುದೇ ಕಾಮಾಗಾರಿ ನಡೆಸದಂತೆ ತಡೆ ನೀಡಿದೆ.
7/ 8
ಕಟ್ಟಡಕ್ಕೆ ಯಾವುದೇ ಹಾನಿ ಮಾಡದಂತೆ ನ್ಯಾಯಾಲಯ ಅದೇಶಿಸಿದೆ. ಇದರ ಜೊತೆಗೆ ಮಸೀದಿ ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಒಳಭಾಗಕ್ಕೆ ಪ್ರವೇಶಿಸದಂತೆ ನಿರ್ಬಂಧವನ್ನು ನ್ಯಾಯಾಲಯವನ್ನು ವಿಧಿಸಿದೆ.
8/ 8
ಹಿಂದೂ ಪರ ಸಂಘಟನೆಗಳು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿವೆ. ಸದ್ಯ ಮಸೀದಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.