ನಮ್ಮ ಮನೆಗೆ ಬಂದಾಗಲೂ ಸಹ ನಮ್ಮನ್ನೇ ಅತಿಥಿಯಂತೆ ಟ್ರೀಟ್ ಮಾಡಿದ ವ್ಯಕ್ತಿ ಪುನೀತ್. ಅವರ ಕುಟುಂಬ, ಅಭಿಮಾನಿಗಳಿಗೆ ನನ್ನ ಸಂತಾಪಗಳು. We love You Punith. ಪುನೀತ್ ಎಷ್ಟು ವಿನಯಶೀಲರಾಗಿದ್ದರು ಅಂದರೆ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದರು, ಸ್ನೇಹಿತರಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರ ಸಾವು ಸಿನಿಮಾರಂಗಕ್ಕೆ ದೊಡ್ಡ ನಷ್ಟ. ಕುಟುಂಬದವರನ್ನೇ ಕಳೆದುಕೊಂಡಷ್ಟು ನೋವಾಗ್ತಿದೆ. ಮಾನವೀಯತೆಗೆ ಇನ್ನೊಂದು ಹೆಸರೇ ಪುನೀತ್ ಎಂದು ರಾಮ್ ಚರಣ್ ಬಣ್ಣಿಸಿದರು.
ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಕೂಡ ಅಪ್ಪು ಮನೆಗೆ ಭೇಟಿ ನೀಡಿದರು. ಪುನೀತ್ ಅಕಾಲಿಕ ನಿಧನದಿಂದ ಮನಸಿಗೆ ತುಂಬಾ ನೋವಾಗಿದೆ. ಅವರು ಬಲಗೈ ನಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯದಂತೆ ಸೇವೆ ಮಾಡ್ತಿದ್ರು. ಅವರ ಅಗಲುವಿಕೆ ತಡೆದುಕೊಳ್ಳುವ ಶಕ್ತಿ ಯನ್ನು ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ದೇವರು ನೀಡಲಿ. ಅವರ ಸೇವಾಕಾರ್ಯಗಳನ್ನು ಅಭಿಮಾನಿಗಳು ಅನುಸರಿಸಿಕೊಂಡು ಹೋಗಲಿ ಎಂದರು.