ಚಿಕ್ಕಮಗಳೂರಿನ ಗಿರಿ ಪ್ರದೇಶಕ್ಕೆ ಮಿನಿ ಬಸ್ ಸೌಲಭ್ಯ ; ಟ್ಯಾಕ್ಸಿ ಚಾಲಕರಿಂದ ವಿರೋಧ
ಜಿಲ್ಲಾಡಳಿತ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ಪ್ರವಾಸಿ ತಾಣಗಳಿಗೆ ಮಿನಿ ಬಸ್ ಬಿಡೋದಕ್ಕೆ ಚಿಂತಿಸಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಜತೆ ಜಿಲ್ಲಾಡಳಿತ ಮಾತುಕತೆ ಕೂಡ ನಡೆಸಿದೆ. ಇದಕ್ಕೆ ಎರಡು ಇಲಾಖೆಗಳು ಹಸಿರು ನಿಶಾನೆ ನೀಡಿದೆ. ಜಿಲ್ಲಾಡಳಿತದ ನಿರ್ಧಾರದಿಂದ ಪ್ರವಾಸಿ ವಾಹನದ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಖಾಸಗಿ ವಾಹನಗಳಲ್ಲಿ ನೀವು ಕಾಫಿನಾಡಿಗೆ ಟೂರ್, ಪಿಕ್ನಿಕ್ ಅಂತೆಲ್ಲಾ ಬಂದ್ರೆ ನಿಮ್ಮ ವಾಹನವನ್ನ ನಗರದಲ್ಲೇ ಪಾರ್ಕ್ ಮಾಡಿ ಸರ್ಕಾರಿ ಬಸ್ ನಲ್ಲಿ ಓಡಾಡಬೇಕು ಬೇಕೆಂದಾಗ-ಬೇಕಾದಂತೆ ಗಾಡಿ ನಿಲ್ಲಿಸಿ ಫೋಟೋ ಸೆಷನ್ ನಡೆಸುವುದಕ್ಕೂ ಆಗಲ್ಲ.
2/ 9
ಜಿಲ್ಲಾಡಳಿತ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ಪ್ರವಾಸಿ ತಾಣಗಳಿಗೆ ಮಿನಿ ಬಸ್ ಬಿಡೋದಕ್ಕೆ ಚಿಂತಿಸಿದೆ.
3/ 9
ಈಗಾಗಲೇ ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಜೊತೆ ಜಿಲ್ಲಾಡಳಿತ ಮಾತುಕತೆ ಕೂಡ ನಡೆಸಿದೆ. ಇದಕ್ಕೆ ಎರಡು ಇಲಾಖೆಗಳು ಕೂಡ ಹಸಿರು ನಿಶಾನೆ ನೀಡಿದೆ.
4/ 9
ಶುಕ್ರವಾರ, ಶನಿವಾರ, ರವಿವಾರ ಸಾಕಷ್ಟು ಪ್ರವಾಸಿಗರು ಬರುತ್ತಿದ್ದು, ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಗಿರಿ ಭಾಗಕ್ಕೆ ಮಿನಿ ಬಸ್ ಬಿಡಲು ಮುಂದಾಗಿದೆ.
5/ 9
ಈ ಭಾಗದ ಅತ್ತಿಗುಂಡಿ, ಮಹಲ್, ನೆತ್ತಿಚೌಕ ಸೇರಿದಂತೆ ಕೆಲ ಗ್ರಾಮದ ಜನ ನಗರಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಿ ಬರುವುದಕ್ಕೆ ತೊಂದರೆಯಾಗುತ್ತಿತ್ತು. ಅವರ ಅನುಕೂಲ ಹಾಗೂ ಬೇಡಿಕೆಗೂ ಸರ್ಕಾರ ಮನ್ನಣೆ ನೀಡಿದೆ.
6/ 9
ಜಿಲ್ಲಾಡಳಿತದ ನಿರ್ಧಾರದಿಂದ ಪ್ರವಾಸಿ ವಾಹನದ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗಾಗಿ ಸರ್ಕಾರ ಏನೂ ಮಾಡಿಲ್ಲ. ಈಗ ನಮ್ಮ ಹೊಟ್ಟೆ ಮೇಲೆ ಹೊಡೆಯೋದಕ್ಕೆ ಮುಂದಾಗಿದೆ.
7/ 9
ನಾವು ಬೀದಿಗೆ ಬೀಳೋದು ಗ್ಯಾರಂಟಿ ವಾರದಲ್ಲಿ ಎರಡು ದಿನ ದುಡಿಯುತ್ತೀವಿ ಅದಕ್ಕೂ ಸರ್ಕಾರ ಕಲ್ಲು ಹಾಕುತ್ತಿದೆ. ಸಾಲ ಮಾಡಿ, ಸಾಲವನ್ನು ಕಟ್ಟಿಕೊಂಡು ಬದುಕುತ್ತಿದ್ದೇವೆ. ಮಿನಿ ಬಸ್ ಬಿಟ್ಟರೆ ನಮಗಾಗಿ ಬೇರೆ ಏನು ಮಾಡ್ತಾರೆಂದು ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದಾರೆ.
8/ 9
ಇನ್ಮುಂದೆ ಗಿರಿಭಾಗದಲ್ಲಿ ಸಣ್ಣ-ಪುಟ್ಟ ಅಪಘಾತಗಳಾಗಿ ಪ್ರವಾಸಿಗಳು ಜಗಳವಾಡೋದು ತಪ್ಪುತ್ತೆ. ಹಳ್ಳಿಗರು ಬಸ್ ನಲ್ಲಿ ಕಿಲೋ ಮೀಟರ್ ನಡೆಯೋದು ತಪ್ಪುತ್ತೆ. ಮಕ್ಕಳು ಸರಿಯಾದ ಸರಿಯಾಗಿ ಶಾಲೆಗೆ-ಮನೆಗೆ ಬರಬಹುದು
9/ 9
ಸರ್ಕಾರದ ನಡೆ ಪ್ರವಾಸಿಗರಿಗೆ-ಟ್ಯಾಕ್ಸಿ ಚಾಲಕರಿಗೆ ಬೇಜಾರು ತರಿಸಿದ್ರೆ ಪ್ರವಾಸಿಗರ ಭದ್ರತೆ ಹಾಗೂ ಹಾಗೂ ಸ್ಥಳಿಯರಿಗಂತು ಅನುಕೂಲವಾಗಲಿದೆ. ಆದರೆ, ಗಿರಿಭಾಗಕ್ಕೆ ಮಿನಿ ಬಸ್ ಯಾವಾಗ ಬರುತ್ತವೆ. ಪ್ರವಾಸಿಗರು ಹೊಂದುಕೊಳ್ಳುತ್ತಾರೆ. ಟ್ಯಾಕ್ಸಿ ಚಾಲಕರು ಸುಮ್ಮನಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕು.