Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

ಕರಾವಳಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರಚಾರ ಆರಂಭಿಸಿದ್ದಾರೆ. ಉಡುಪಿಯಲ್ಲಿ ಪ್ರಗತಿಪಥ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಅಣ್ಣಾಮಲೈ ಈ ಹಿಂದೆ ಕರಾವಳಿಯಲ್ಲೇ ಎಸ್‌ಪಿಯಾಗಿ ಕೆಲಸ ಮಾಡಿದ್ದರಿಂದ ಬಿಜೆಪಿ  ಅಣ್ಣಾಮಲೈ ಅವರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

First published:

  • 19

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಣ್ಣಾಮಲೈ ಪ್ರಚಾರ ಆರಂಭಿಸಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಚಿವ ಸುನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು.

    MORE
    GALLERIES

  • 29

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅಣ್ಣಾಮಲೈ, ಇದೇ ಕಾರ್ಕಳಕ್ಕೆ ಪೊಲೀಸ್ ಅಧಿಕಾರಿ ಆಗಿ ಬಂದಾಗ ಭಯ ಇತ್ತು. ಇದು ಪಶ್ಚಿಮ ಘಟ್ಟದ ಮೂಲೆಯ ನಕ್ಸಲ್ ಪೀಡಿತ ಪ್ರದೇಶವಾಗಿತ್ತು. ಎಎಸ್​​ಪಿ ಆಗಿದ್ದಾಗ ಕಾರ್ಕಳದ ಜನರ ಸಹಕಾರ ಮರೆಯಲ್ಲ ಎಂದರು.

    MORE
    GALLERIES

  • 39

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಕಾರ್ಕಳ ಈ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದರೂ ಪ್ರಯೋಜನ ಆಗಲಿಲ್ಲ. ಕಾರ್ಕಳ ಒಂದು ಅನ್ ಲಕ್ಕಿ ಕ್ಷೇತ್ರವಾಗಿತ್ತು. ಈಗ ಸರ್ಕಾರ ಮತ್ತು ಶಾಸಕ‌ ಒಂದೇ ಪಕ್ಷ ಬಂದಿರುವುದು ಭಾಗ್ಯ. ಮೂರು ವರ್ಷ ಸುನಿಲ್ ಕುಮಾರ್ ಮಂತ್ರಿಯಾದ ಮೇಲೆ ಅಣೆಕಟ್ಟು, ರಸ್ತೆ ಅಭಿವೃದ್ದಿ ಊಹಿಸಲಾಗದ ರೀತಿ ಅಭಿವೃದ್ಧಿ ಕಂಡಿದೆ ಎಂದು ಸಚಿವರನ್ನು ಹಾಡಿ ಹೊಗಳಿದರು.

    MORE
    GALLERIES

  • 49

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಈಗ ನಕ್ಸಲ್ ಚಟುವಟಿಕೆ ಝೀರೋ ಆಗಿದೆ. ಮನೆ ಮನೆಗೂ ರಸ್ತೆ ಮಾಡಿರುವುದು ಅಚ್ಚರಿಯಾಗಿದೆಹತ್ತು ವರ್ಷ ಬಿಟ್ಟು ಕಾರ್ಕಳ ನೋಡುವಾಗ ಅಭಿವೃದ್ಧಿ, ಬದಲಾವಣೆ ಆಗಿದೆ. ಇದಕ್ಕೆ ಮೂಲ ಕಾರಣ ಬಿಜೆಪಿ ಎಂದರು.

    MORE
    GALLERIES

  • 59

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಈವರೆಗೆ ಮ್ಯಾಜಿಕ್ ನಂಬರ್ 113 ಕೊಟ್ಟಿಲ್ಲ. ಜನ ಪರೀಕ್ಷಿಸಿ ಪರೀಕ್ಷಸಿ ಅಧಿಕಾರ ನೀಡುತ್ತಾ ಬಂದಿದಾರೆ. ಯಡಿಯೂರಪ್ಪ, ಬೊಮ್ಮಾಯಿ ಮೂರು ವರ್ಷಗಳಲ್ಲಿ ಸಿಎಂ ಆಗಿ ನಿಜವಾದ ಅಭಿವೃದ್ಧಿ ತೋರಿಸಿದ್ದಾರೆ. ಈ ಬಾರಿ ಸುನಿಲ್ ಪಡೆಯುವ ಮತ ಒಂದು ಲಕ್ಷ ಮತ ದಾಟುತ್ತೆ ಎಂದು ಭವಿಷ್ಯ ನುಡಿದರು.

    MORE
    GALLERIES

  • 69

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಮೂರು ವರ್ಷ ಶಾಸಕರ ಕೆಲಸ ತೋರಿಸಿದ್ದಾರೆ, ಗೆಲ್ಲಿಸುವುದು ಕಾರ್ಯಕರ್ತರ ಜವಾಬ್ದಾರಿ. ಡಬ್ಬಲ್ ಇಂಜಿನ್ ಸರ್ಕಾರ ಅಂದ್ರೆ ಏನು ಅಂತ ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    MORE
    GALLERIES

  • 79

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಘೋಷಿತ ಯೋಜನೆಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಇದೆ . ಬಹುಮತದ ಸರ್ಕಾರ ಇದ್ದಾಗ ರಿಸ್ಕಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮುಂದಿನ ಐವತ್ತು ದಿನದಲ್ಲಿ ಪ್ರತಿ ಮನೆಗೂ ಹತ್ತು ಬಾರಿ ಹೋಗಬೇಕು. ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ತಲುಪಿ, ಮನವರಿಕೆ ಮಾಡಿ ಎಂದು ಹೇಳಿದರು.

    MORE
    GALLERIES

  • 89

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಪವರ್ ಆಫ್ ಡಬಲ್ ಇಂಜಿನ್ ಸರ್ಕಾರ ಏನು ಅಂತ ತೋರಿಸಬೇಕು. ತಮಿಳುನಾಡಿಗೆ ಅಭಿವೃದ್ಧಿ ಕಾಣುವ ಅವಕಾಶ ಸಿಕ್ಕಿಲ್ಲ. ಕಳೆದ ಮೂರು ವರ್ಷ ಒಂದು ಆಡಳಿತ ಒಂದು ಟ್ರೈಲರ್. ಮುಂದೆ ಒಂದು ಒಳ್ಳೆಯ ಸಿನಿಮಾ ಸಿದ್ಧವಾಗಿದೆ. ಹಾಗಾಗಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

    MORE
    GALLERIES

  • 99

    Annamalai: ಡಬಲ್ ಇಂಜಿನ್ ಸರ್ಕಾರದ ಪವರ್ ತೋರಿಸಿ; ಕರಾವಳಿಯಲ್ಲಿ ಅಣ್ಣಾಮಲೈ ಮಿಂಚಿನ ಸಂಚಾರ

    ಕಾರ್ಕಳ ಕ್ಷೇತ್ರದಲ್ಲಿ ನಾನೇ ಮೋದಿ ಎಂದು ಕಾರ್ಯಕರ್ತರು ಕೆಲಸ ಮಾಡಬೇಕು. 2029 ರಲ್ಲಿ ಎಲ್ಲಾ ಹಂತದಲ್ಲೂ ಬಿಜೆಪಿ ಮಾತ್ರ ಇರುತ್ತೆ. ದೇಶದ ನಿಜವಾದ ಪವರ್ ಏನು ಅಂತ ಆಗ ಗೊತ್ತಾಗುತ್ತದೆ ಎಂದರು.

    MORE
    GALLERIES