ಈ ವೇಳೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹ್ಯಾರಿಸ್ ನಲಪಾಡ್ )Mohammed Haris Nalapad) ಮತ್ತು ರೈತರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
2/ 8
ರೈತ ಸಂವಾದಲ್ಲಿ ಮಾತನಾಡುತ್ತಿದ್ದ ನಲಪಾಡ್, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂಬ ಮಾತಿಗೆ ರೈತರೊಬ್ಬರು ವಿರೋಧ ವ್ಯಕ್ತಪಡಿಸಿದರು.
3/ 8
ಈ ವೇಳೆ ರೈತನಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ನಲಪಾಡ್ ಏಕವಚನದಲ್ಲಿಯೇ ಮಾತನಾಡಿದರು. ಇದರಿಂದ ಕೋಪಗೊಂಡ ರೈತ ಯಾವನೋ, ಗೀವನೋ ಅಂದ್ರೆ ಸರಿ ಇರಲ್ಲ ಮರು ಉತ್ತರ ನೀಡಿದರು.
4/ 8
ಬಿಜೆಪಿ ಸರ್ಕಾರ ಕಮಿಷನ್ ಪಡೆಯುತ್ತಿದೆ ಎಂದು ನಾವು ಹೇಳುತ್ತಿಲ್ಲ. ಹೀಗೆ ಹೇಳಿದ್ದು ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ. 40 ಪರ್ಸೆಂಟ್ ಕಮಿಷನ್ ನಿಂದ ಜೀವ ಕಳೆದುಕೊಂಡಿದ್ದು ಬಿಜೆಪಿಯ ಕಾರ್ಯಕರ್ತ ಎಂದರು.
5/ 8
ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಯಾವನೋ ಅವನು ಕುಡಿದು ಬಿಟ್ಟು ಹೇಳುವುದನ್ನು ಕೇಳಿ. ನೀವು ಟೆನ್ಷನ್ ತೆಗೆದುಕೊಳ್ಳಬೇಡಿ, ನಾನು ಹೇಳುವದನ್ನು ಕೇಳಿ ಎಂದು ಹೇಳುತ್ತಾರೆ.
6/ 8
ನಲಪಾಡ್ ಮಾತಿಗೆ ಸಂವಾದದಲ್ಲಿಯೇ ಕೋಪಗೊಂಡ ರೈತ ಯಾವನೋ ,ಗೀವನೋ ಅಂದ್ರೆ ಸರಿ ಇರಲ್ಲ ಎಂದು ತಿರುಗೇಟು ನೀಡಿದರು.
7/ 8
ನಲಪಾಡ್ ಮಾತಿಗೆ ಸಂವಾದದಲ್ಲಿಯೇ ಕೋಪಗೊಂಡ ರೈತ ಯಾವನೋ ,ಗೀವನೋ ಅಂದ್ರೆ ಸರಿ ಇರಲ್ಲ ಎಂದು ತಿರುಗೇಟು ನೀಡಿದರು.
8/ 8
ಈ ವೇಳೆ ಇತರರು ರೈತನನ್ನು ಸಮಾಧಾನ ಮಾಡಲು ಮುಂದಾದರು. ಕೊನೆಗೆ ಮಧ್ಯ ಪ್ರವೇಶಿಸಿದ ಪೊಲೀಸರು ರೈತನನ್ನು ವೇದಿಕೆಯಿಂದ ದೂರ ಕರೆದುಕೊಂಡು ಹೋದರು.