Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

ಕೊನೆಗೂ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗುವುದು ಫಿಕ್ಸ್​ ಆಗಿದ್ದು, ಘೋಷಣೆಯಾಗುವುದೊಂದೇ ಬಾಕಿ ಇದೆ ಎಂದು ನ್ಯೂಸ್​ 18 ಕನ್ನಡಕ್ಕೆ ಸಂಸದೆಯ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆಗೂ ಮಾತುಕತೆ ನಡೆದಿದೆ ಎನ್ನಲಾಗಿದೆ.

First published:

  • 18

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ಆದರೂ ಈಗ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಿರುವುದರಿಂದ ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರೆ.

    MORE
    GALLERIES

  • 28

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಜೆಡಿಎಸ್​ನ ಪ್ರಬಲ ಕೋಟೆ ಎಂದೇ ಕರೆಸಿಕೊಳ್ಳುವ ಮಂಡ್ಯ ಕ್ಷೇತ್ರದಲ್ಲಿ ಈ ಬಾರೀ ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು, ಸಂಸದೆ ಸುಮಲತಾ ಅಖಾಡಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ. ಸಂಸದೆಯಾಗಿರುವ ಸುಮಲತಾ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಲಕ್ಷಣಗಳೂ ಕಂಡು ಬಂದಿವೆ.

    MORE
    GALLERIES

  • 38

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಈಗಾಗಲೇ ಸುಮಲತಾ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಖಚಿತ ಎನ್ನಲಾಗಿದ್ದು, ಈ ಬಗ್ಗೆ ಕಮಲ ಪಾಳಯದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆಗೂ ಮಾತನಾಡಿದ್ದಾರೆನ್ನಲಾಗಿದೆ. ನಾಳೆ ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಸುಮಲತಾ ಅಂಬರೀಶ್ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

    MORE
    GALLERIES

  • 48

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ಕ್ಕೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಈ ಪತ್ರಿಕಾಗೋಷ್ಠಿ ಕುತೂಹಲಕ್ಕೆ ಕಾರಣವಾಗಿದೆ.

    MORE
    GALLERIES

  • 58

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಇನ್ನು ಇಂದು ಜೆಪಿ ನಡ್ಡಾ ಜೊತೆ ಮಾತುಕತೆ ಬಳಿಕ ಮಂಡ್ಯ ಜವಾಬ್ದಾರಿ ಸುಮಲತಾ ಹೆಗಲಿಗೆ ಹಾಕಲು ಬಿಜೆಪಿ ತೀರ್ಮಾನ ಕೈಗೊಂಡಿದೆ ಎಂದೂ ಹೇಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಸಾಧ್ಯತೆಯೂ ಕಂಡು ಬಂದಿದೆ.

    MORE
    GALLERIES

  • 68

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಆದರೆ ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಅಭ್ಯರ್ಥಿ ಆದ್ರೆ ಮಾತ್ರ ಸುಮಲತಾ ಸ್ಪರ್ಧೆ ಖಚಿತ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಿರುವ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಬಂದರಷ್ಟೇ ಅವರ ವಿರುದ್ದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ.

    MORE
    GALLERIES

  • 78

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಸುಮಲತಾ ಕಳೆದ ವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್‌. ಎಂ. ಕೃಷ್ಣ ಭೇಟಿಯಾಗಿದ್ದರು. ಬಳಿಕ ಬೆಂಗಳೂರಿನ ಜೆ. ಪಿ. ನಗರದ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದರು. ಆ ಸಭೆಯಲ್ಲಿಯೇ ಬಿಜೆಪಿ ಸೇರುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

    MORE
    GALLERIES

  • 88

    Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?

    ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಸಿ. ಟಿ ರವಿ ಇನ್ನೂ 24 ತಾಸು ಕಾಯೋಣ ಎಲ್ಲವೂ ಸ್ಪಷ್ಟವಾಗಲಿದೆ ಎಂದಿದ್ದಾರೆ. ಈ ಮೂಲಕ ಸುಮಲತಾ ಬಿಜೆಇ ಸೇರುವ ಸಾಧ್ಯತೆಗಳಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

    MORE
    GALLERIES