Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

ಹಲವಾರು ವದಂತಿಗಳ ಮಧ್ಯೆ ಕೊನೆಗೂ ಸುಮಲತಾ ಅಂಬರೀಶ್ ರಾಜಕೀಯ ನಡೆ ಏನೆಂಬುವುದು ಸ್ಪಷ್ಟವಾಗಿದೆ. ಸುದ್ದಿಗೋಷ್ಠಿ ನಡೆಸಿದ ಅಂಬಿ ಪತ್ನಿ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ ಮಂಡ್ಯವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

First published:

  • 19

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಮಹತ್ವದ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ನಿರೀಕ್ಷೆಯಂತೆ ತಮ್ಮ ಬೆಂಬಲವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಘೋಷಿಸಿದ್ದಾರೆ. ಇದೇ ವೇಳೆ ಪರೋಕ್ಷವಾಗಿ ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    MORE
    GALLERIES

  • 29

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಹೌದು ಈ ಹಿಂದೆಯೇ ತಾಂತ್ರಿಕ ಕಾರಣ ಹಾಗೂ ಕಾನೂನು ತೊಂದರೆಗಳಿಂದ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗೋದು ಅನುಮಾನ ಎಂದು ಹೇಳಲಾಗಿತ್ತು. ಆದರೆ ಅವರು ತಮ್ಮ ಬೆಂಬಲ ಕಮಲ ಪಾಳಯಕ್ಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಸದ್ಯ ಅವರು ಈ ಘೋಷಣೆಯನ್ನು ಮಾಡಿದ್ದಾರೆ.

    MORE
    GALLERIES

  • 39

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಸುದ್ದಿಗೋಷ್ಠಿಯಲ್ಲಿ ಮಂಡ್ಯ ಕ್ಷೇತ್ರಾಭಿವೃದ್ಧಿ ಬಗ್ಗೆ ಮಾತನಾಡಿದ ಅಂಬಿ ಪತ್ನಿ ತಾನು ಸ್ವಾರ್ಥಿಯಾಗಿದ್ದರೆ ಅವಕಾಶವನ್ನು ಬಳಸಿ ತನ್ನ ಲಾಭಕ್ಕಾಗಿ ಕೆಲಸ ಮಾಡಬಹುದಿತ್ತು. ಆದರೆ ನನ್ನ ಯೋಚನೆ ಅದಾಗಿರಲಿಲ್ಲ. ಕ್ಷೇತ್ರವೇ ನನ್ನ ಪಾಲಿಗೆ ಮುಖ್ಯವಾಗಿತ್ತು ಎಂದಿದ್ದಾರೆ.

    MORE
    GALLERIES

  • 49

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಇದೇ ವೇಳೆ ಕುಟುಂಬ ರಾಜಕಾರಣದ ಬಗ್ಗೆ ಉಲ್ಲೇಖಿಸಿ ಎಚ್​ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸುಮಲತಾ ಅಂಬರೀಶ್, ಈ ಹಿಂದಿನ ಚುನಾವಣೆ ವೇಳೆ ನಡೆದ ಘಟನೆಗಳನ್ನು ಉಲ್ಲೇಖಿಸಿದರು.

    MORE
    GALLERIES

  • 59

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಇದೇ ವೇಳೆ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ ನೀಡುವ ಬಗ್ಗೆಯೂ ಮಾತನಾಡಿದ ಅವರು, ತಾನು ರಾಜಕೀಯದಲ್ಲಿ ಇರುವವರೆಗೆ ಯಾವುದೇ ಕಾರಣಕ್ಕೂ ನನ್ನ ಮಗ ಅಭಿಷೇಕ್ ಈ ಕ್ಷೇತ್ರಕ್ಕೆ ಬರುವುದಿಲ್ಲ ಎಂದಿದ್ದಾರೆ.

    MORE
    GALLERIES

  • 69

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಇನ್ನು ಪಕ್ಷಕ್ಕೆ ಯಾಕೆ ಸೇರ್ಪಡೆಯಾಗಲಿಲ್ಲ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದ ಸುಮಲತಾ ನಾನು ಪಕ್ಷೇತರಳಾಗಿ ಸ್ಪರ್ಧಿಸಿ ಗೆದ್ದಿದ್ದೆ. ಪಕ್ಷಕ್ಕೆ ಸೇರ್ಪಡೆಯಾಗುವುದಿದ್ದರೆ ಗೆದ್ದ ಆರು ತಿಂಗಳೊಳಗೆ ಹೋಗಬೇಕಿತ್ತು. ಆದರೀಗ ನಾನು ಸಂಸದೆಯಾಗಿ ನಾಲ್ಕು ವರ್ಷ ಆಗಿದೆ. ಈಗ ಕಾನೂನು ತೊಡಕುಗಳಿವೆ ಎಂದಿದ್ದಾರೆ.

    MORE
    GALLERIES

  • 79

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಬಿಜೆಪಿಗೆ ಬೆಂಬಲ ಯಾಕೆಂಬ ಪ್ರಶ್ನೆ ಉತ್ತರಿಸಿದ ಅವರು ಮೋದಿಗೆ ಮಂಡ್ಯ ಎಂದರೆ ಅಪಾರ ಕಾಳಜಿ. ಇಲ್ಲಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಪಕ್ಷೇತರಳಾಗಿದ್ದರೂ ಯಾವುದೇ ಬೇಧವಿಲ್ಲದೇ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಿದೆ ಎಂದಿದ್ದಾರೆ.

    MORE
    GALLERIES

  • 89

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಅಂತಿಮವಾಗಿ ಮಾತನಾಡಿದ ಅವರು ರಾಜಕಾರಣ ಬಿಡುತ್ತೇನೆ ಆದರೆ ಸ್ವಾಭಿಮಾನ ಬಿಡಲ್ಲ, ಪ್ರಾಣ ಬಿಡುತ್ತೇನೆ ಆದ್ರೆ ಮಂಡ್ಯ ಬಿಡಲ್ಲ ಎಂದು ನುಡಿದಿದ್ದಾರೆ.

    MORE
    GALLERIES

  • 99

    Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!

    ಸುಮಲತಾ ಕಳೆದ ವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್‌. ಎಂ. ಕೃಷ್ಣ ಭೇಟಿಯಾಗಿದ್ದರು. ಬಳಿಕ ಬೆಂಗಳೂರಿನ ಜೆ. ಪಿ. ನಗರದ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದರು. ಆ ಸಭೆ ಬಳಿಕ ಸುಮಲತಾ ರಾಜಕೀಯ ನಡೆ ಬಗ್ಗೆ ಅನೇಕ ವದಂತಿಗಳು ಎಬ್ಬಿದ್ದವು.

    MORE
    GALLERIES