Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

ಪೂರ್ವ ಮುಂಗಾರಿನ ಚಟುವಟಿಕೆಗಳು ಬೇಗ ಆರಂಭವಾಗುವುದರಿಂದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಜ್ಞರು ತಿಳಿಸಿದ್ದಾರೆ.

First published:

  • 17

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಹವಾಮಾನದಲ್ಲಿ ಉಂಟಾಗುತ್ತಿರುವ ತೀವ್ರ ಬದಲಾವಣೆಯಿಂದ ಈ ವರ್ಷದ ಆರಂಭದ ಪೂರ್ವ ಮುಂಗಾರು ಚಟುವಟಿಕೆಗಳು ಬೇಗ ಪ್ರಾರಂಭವಾಗುತ್ತದೆ. ಇದು ಉತ್ತರ ಕರ್ನಾಟದ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪರಿಣಾಮ ಉಂಟು ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

    MORE
    GALLERIES

  • 27

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಪೂರ್ವ ಮುಂಗಾರಿನ ಚಟುವಟಿಕೆಗಳು ಬೇಗ ಆರಂಭವಾಗುವುದರಿಂದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್​ ಮೊದಲ ವಾರ ಎಂದರೆ ಮಾರ್ಚ್​​ 6 ರಿಂದ 8ರ ನಡುವೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್​​ ಎರಡನೇ ವಾರದ ನಂತರ ಮಳೆಯಾಗುವ ಅವಕಾಶವಿದೆ.

    MORE
    GALLERIES

  • 37

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಆದರೆ ಪೂರ್ವ ಮುಂಗಾರಿನ ಮಳೆ ಕೃಷಿ ಚಟುವಟಿಕೆಗಳು ಚುರುಕುಕೊಳ್ಳಲು ಕಾರಣವಾದರೂ, ಈ ಅವಧಿಯಲ್ಲಿಯ ಬೆಳೆಗಳಲ್ಲಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿ ವರ್ಷ ಮಾರ್ಚ್​​ ತಿಂಗಳ ಮಧ್ಯದಲ್ಲಿ ರಚನೆಯಾಗುತ್ತಿದ್ದ ಮಳೆ ಮಾರುತಗಳು ಈ ವರ್ಷ ಬೇಗ ರಚನೆಯಾಗಿದ್ದು, ಇದರಿಂದ ಪೂರ್ವ ಮುಂಗಾರು ಮಳೆ ಬೇಗ ಆಗಮಿಸಿರುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 47

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಮಾರ್ಚ್​​​ 9 ರಿಂದ 15ರ ನಡುವೆ ಉತ್ತರ ಸೇರಿದಂತೆ ಮಧ್ಯ ಭಾರತದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್​​​ 16 ರಿಂದ 22ರ ನಡುವೆ ದಕ್ಷಿಣ ಪೆನಿನ್ಸುಲರ್​​ ಪ್ರದೇಶ ಸೇರಿದಂತೆ ದೇಶದ ಪ್ರಮುಖ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    MORE
    GALLERIES

  • 57

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಕ್ಲೆಮೆಂಟ್​ ಟ್ರೆಂಡ್​ ಮಾಹಿತಿಯಂತೆ ಮಾರ್ಚ್​​​ 13ರಿಂದ 18ರ ಅವಧಿಯಲ್ಲಿ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲೆಯಲ್ಲಿನ ತೇವಾಂಶದಿಂದ ಅವಳಿ ಚಂಡಮಾರುತಗಳು ರಚನೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಪಶ್ಚಿಮ ಏಷ್ಯಾದಿಂದ ಬೀಸುವ ಗಾಳಿಯಿಂದ ಭಾರತದ ಮಧ್ಯ ಭಾಗ, ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಹವಾಮಾನ ಚಟುವಟಿಕೆಗಳು ನಡೆಯಲಿದೆ.

    MORE
    GALLERIES

  • 67

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    ಮುಂಗಾರು ಪೂರ್ವ ಗುಡುಗು ಸಹಿತ ಮಳೆ ಹಾಗೂ ದೀರ್ಘಾವಧಿಯ ಮಳೆಗಾಲಕ್ಕೆ ದೇಶ ಸಜ್ಜಾಗಬೇಕಿದೆ ಎಂದು ವರದಿಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಭಾರತದ ಬಯಲು ಪ್ರದೇಶ, ದಕ್ಷಿಣ ಭಾರತದ ಬಯಲು ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರ ಕರ್ನಾಟಕದಲ್ಲಿ ಗುಡುಗು-ಸಿಡಿಲು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.

    MORE
    GALLERIES

  • 77

    Pre-monsoon Rains: ರೈತರಿಗೆ ಗುಡ್​​ ನ್ಯೂಸ್ ಕೊಟ್ಟ ಹವಾಮಾನ ಇಲಾಖೆ

    1901ರ ನಂತರ ಹಾಗೂ ಕಳೆದ ಮೂವತ್ತು ವರ್ಷಗಳ ಅವಧಿಯನ್ನು ಗಮನಿಸುವುದಾದರೆ ಈ ವರ್ಷ ಫೆಬ್ರವರಿಯಲ್ಲಿ ಅತ್ಯಂತ ಹೆಚ್ಚಿನ ಬಿಸಿಲು ದಾಖಲಾಗಿದೆ. ಇದರ ಪರಿಣಾಮದಿಂದ ದೇಶದಲ್ಲಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

    MORE
    GALLERIES