Russia-Ukraine Crisis: ಅಂತೂ ಉಕ್ರೇನ್ನಿಂದ ಬೆಂಗಳೂರಿಗೆ ಬಂದಿಳಿದ ವಿದ್ಯಾರ್ಥಿಗಳು, ಈಗ ಹೇಗಿದ್ದಾರೆ ನೋಡಿ..ಭಾವನಾತ್ಮಕ ಕ್ಷಣಗಳ ಚಿತ್ರಗಳು
Students Return: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾರತದ ವಿದ್ಯಾರ್ಥಿಗಳ ಮೇಲೆ ಸಹ ಪರಿಣಾಮ ಬೀರಿತ್ತು. ಓದಲು ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ಆದರೆ ಸರ್ಕಾರದ ಸಹಾಯದಿಂದ ಸದ್ಯ ಕೆಲ ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ. ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಸಹ ಅಲ್ಲಿದ್ದು, ಇದೀಗ 12 ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ. ಮರಳಿ ಬಂದ ಅವರನ್ನು ಕಂದಾಯ ಸಚಿವ ಆರ್. ಅಶೋಕ್ ಸ್ವಾಗತಿಸಿದ್ದ, ಕುಟುಂಬವನ್ನು ಸೇರುತ್ತಿರುವ ಸಂತಸದಲ್ಲಿರುವ ವಿದ್ಯಾರ್ಥಿಗಳ ಕೆಲ ಫೋಟೋಗಳು ಇಲ್ಲಿವೆ.
ಈ ಯುದ್ದದ ಕಾರಣದಿಂದ ಸಿಲುಕಿಕೊಂಡಿದ್ದ ಕನ್ನಡಿಗರು ಊಟಕ್ಕಾಗಿ ಸಹ ಪರದಾಡುವಂತ ಪರಿಸ್ಥಿತಿ ಇತ್ತು, ನಿನ್ನೆ ರಾತ್ರಿ ಮುಂಬೈ ತಲುಪಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು.
2/ 8
ಇನ್ನು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಏರ್ಪೋರ್ಟ್ ಲಾಂಜ್ನಲ್ಲೆ ವಿದ್ಯಾರ್ಥಿಗಳಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದ್ದಾರೆ.
3/ 8
ಅಲ್ಲದೇ ವಿದ್ಯಾರ್ಥಿಗಳನ್ನು ಸಂಸದ ತೇಜಸ್ವಿ ಸೂರ್ಯ ಸಹ ಭೇಟಿ ಮಾಡಿದ್ದು, ಸ್ವೀಟ್ ನೀಡಿ ಸ್ವಾಗತಿಸಿದ್ದಾರೆ. ಪರದಾಡುತ್ತಿದ್ದ ಮಕ್ಕಳು ವಾಪಾಸ್ ಆಗಿರುವುದು ಪೋಷಕರ ಸಂತೋಷಕ್ಕೂ ಕಾರಣವಾಗಿದೆ.
4/ 8
ಕನ್ನಡಿಗರು ಸೇರಿದಂತೆ ಅನೇಕ ಭಾರತೀಯರು ಇನ್ನೂ ಉಕ್ರೇನ್ನಲ್ಲೇ ಸಿಲುಕಿ ಕೊಂಡಿದ್ದಾರೆ. ಉಕ್ರೇನ್ನ ಕಾರ್ಕಿವ್ ಪ್ರದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಉಳಿದಿರೋದಾಗಿ ವಿದ್ಯಾರ್ಥಿಯೊಬ್ಬರು ತಿಳಿದಿದ್ದು, ಬೇಗನೆ ಅವರನ್ನು ಸಹ ಮರಳಿ ಕರೆತರಲು ಪ್ರಯತ್ನಿಸಲಾಗುತ್ತಿದೆ.
5/ 8
ಮರಳಿ ಕರೆತಂದಿದ್ದಕ್ಕೆ ವಿದ್ಯಾರ್ಥಿಗಳು ಸಹ ಸಂತಸ ವ್ಯಕ್ತಪಡಿಸಿದ್ದು, ನಮ್ಮನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾರೆ, ರಾಯಭಾರ ಕಚೇರಿ ಅವರು ಸಹ ಧೈರ್ಯ ತುಂಬಿದ್ದರು ಎಂದು ನಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
6/ 8
ಅಲ್ಲದೇ ಹೇಗೆ ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಾಳಜಿವಹಿಸಲಾಗಿತ್ತು, ಕಂದಾಯ ಸಚಿವರ ಕಚೇರಿ ಮತ್ತು ಸಂಸದರ ಕಚೇರಿಯಿಂದ ಕರೆ ಬರುತ್ತಿದ್ದ ಬಗ್ಗೆ ಹೇಳಿಕೊಂಡು ಧನ್ಯವಾದ ತಿಳಿಸಿದ್ದಾರೆ.
7/ 8
ಉಕ್ರೇನ್ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಿಕೊಂಡು ಬಂದ ವಿಶೇಷ ವಿಮಾನ ನಿನ್ನೆ ರಾತ್ರಿ ದೆಹಲಿ ಏರ್ಪೋರ್ಟ್ಗೆ ಬಂದಿಳಿಯಿತು. ರುಮೇನಿಯಾದಿಂದ ಸುಮಾರು 250 ಮಂದಿ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿತ್ತು.
8/ 8
ಅಲ್ಲದೇ, ಇನ್ನುಳಿದ ವಿದ್ಯಾರ್ಥಿಗಳನ್ನು ಸಹ ಶೀಘ್ರದಲ್ಲಿಯೇ ಮರಳಿ ಕರೆತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೊಕ್ ಭರವಸೆ ನೀಡಿದ್ದಾರೆ.