2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

ರಾಜ್ಯದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯು ಪರೀಕ್ಷೆಗೆ ಹಿಜಾಬ್ ಪರ ಹೋರಾಟಗಾರ್ತಿಯರು ಗೈರಾಗಿದ್ದರು. ಶುಕ್ರವಾರ ಪರೀಕ್ಷಾ ಕೇಂದ್ರದ ಬಳಿ ಆಗಮಿಸಿದ್ದ ಇಬ್ಬರು ಹಾಗೆಯೇ ಹೊರ ನಡೆದಿದ್ದರು.  

First published:

  • 18

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಇಂದು ವಿಜ್ಞಾನ ವಿಭಾಗದ ಮೂವರು  ವಿದ್ಯಾರ್ಥಿನಿಯರಿಗೆ ಗಣಿತ ಪರೀಕ್ಷೆ ಇತ್ತು. ಈ ಪೈಕಿ ಅಲ್ಮಾಸ್ ನಿನ್ನೆ ಸಂಜೆ ಹಾಲ್ ಟಿಕೆಟ್ ಪಡೆದಿದ್ದಳು. ಮತ್ತಿಬ್ಬರು ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಕೂಡ ಪಡೆದಿರಲಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಅಲ್ಮಾಸ್ ಪ್ರವೇಶ ಪತ್ರ ಪಡೆದರೂ ಪರೀಕ್ಷೆಗೆ ಬಂದಿಲ್ಲ. ಇನ್ನಿಬ್ಬರು ವಿದ್ಯಾರ್ಥಿನಿಯರು ಸಹ ಪರೀಕ್ಷೆಗೆ ಗೈರಾಗಿದ್ದಾರೆ. ಗಣಿತ ಪರೀಕ್ಷೆಗೆ ಅಲ್ಮಾಸ್, ಹಜ್ರಾ, ಆಯೇಷಾ ಮೂವರು ಗೈರಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಶುಕ್ರವಾರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಆಲಿಯಾ ಅಸಾದಿ ಮತ್ತು ರೇಷ್ಮಾ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಾಗಿ ಹಠ ಮಾಡಿದ್ದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳಿ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದಿಂದ ಇಬ್ಬರು ಹೊರ ಹೋಗಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಶುಕ್ರವಾರ ಪರೀಕ್ಷೆಗೆ ಗೈರಾಗಿದ್ದ ಅಲಿಯಾ ಅಸಾದಿ ಟ್ವೀಟ್ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಳು. ನನಗೆ ಮತ್ತು ರೇಷ್ಮಾಗೆ ಪರೀಕ್ಷೆ ಬರೆಯಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ಇದರಿಂದ ನಾವು ನಿರಾಶರಾಗಿದ್ದೇವೆ ಎಂದು ಹೇಳಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಇದರ ಜೊತೆ ಶಾಸಕ ರಘುಪತಿ ಭಟ್, ಕ್ರಿಮಿನಲ್ ಮತ್ತು ನ್ಯಾಯಾಂಗ ನಿಂದನೆಯ ಕೇಸ್ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಲಿಯಾ ಅಸಾದಿ ಆರೋಪಿಸಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಇಲ್ಲಿ ನ್ಯಾಯಾಂಗ ನಿಂದನೆ ಆಗುವಂತದು ಏನೂ ನಡೆದಿಲ್ಲ. ಕ್ರಿಮಿನಲ್ ಕೇಸ್ ಯಾಕೆ ಹಾಕೋದು. ನಮ್ಮ ದೇಶ ಎತ್ತ ಸಾಗಿದೆ ಎಂದು ಆಲಿಯಾ ಅಸಾದಿ ಹೇಳಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆದಿಲ್ಲ. ಉಳಿದಂತೆ ರಾಜ್ಯದಲ್ಲಿ ಹಿಜಾಬ್ ಕಾರಣಕ್ಕೆ ಗೈರಾಗಿರುವ ವಿಷಯ ಗಮನಕ್ಕೆ ಬಂದಿಲ್ಲ. ನಾನಾ ಕಾರಣಗಳಿಗೆ ಪರೀಕ್ಷೆಗೆ ಗೈರಾಗಿರಬಹುದು ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು

    ಪರೀಕ್ಷೆಗೆ ವಿದ್ಯಾರ್ಥಿನಿಯರು  ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ. SSLC ಪರೀಕ್ಷೆಯಂತೆ ಮಕ್ಕಳು ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ಅಥವಾ ಬುರ್ಕಾ (Burqua) ತೆಗೆದು ಪರೀಕ್ಷಾ ಕೊಠಡಿಗೆ ತೆರಳಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES