DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್, ಕನಕಪುರ ಬಂಡೆ ಎಂದು ಕರೆಯಲಾಗುತ್ತದೆ. ಚುನಾವಣೆ ಪ್ರಚಾರಕ್ಕೆ ಆಗಮಿಸುವ ರಾಜಕೀಯ ನಾಯಕರು ತಮ್ಮೂರಿನ ವಿಶೇಷತೆ ಹಾರ ಹಾಕಿ ಬರಮಾಡಿಕೊಳ್ಳಲಾಗುತ್ತದೆ.

First published:

  • 17

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬು ರಾಯನಕೊಪ್ಪಲಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಬಂಡೆ ಆಕಾರದ ಹಾರ ಹಾಕಲಾಗಿದೆ. ದೊಡ್ಡ ದೊಡ್ಡ ಕಲ್ಲುಗಳ ಮಾದರಿಯಲ್ಲಿ ಹಾರವನ್ನು ಸಿದ್ಧಪಡಿಸಲಾಗಿತ್ತು.

    MORE
    GALLERIES

  • 27

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ. ಇದನ್ನು ಒಡೆದು ಕಲ್ಲು ಮಾಡಬೇಕು. ಚಪ್ಪಡಿ ಮಾಡಬೇಕು. ನಮ್ಮನ್ನೆಲ್ಲ ಮೆಟ್ಟಿಲು ಮಾಡಿಕೊಂಡು ನೀವೆಲ್ಲ ವಿಧಾನಸೌಧಕ್ಕೆ ಬರಬೇಕು ಎಂದು ಹೇಳಿದರು.

    MORE
    GALLERIES

  • 37

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಚಲುವರಾಯಸ್ವಾಮಿ ಮತ್ತು ಬಾಬುಗೆ ಒಂದು ಅವಕಾಶ ನೀಡಬೇಕು. ನಾನು ರಾಜ್ಯದ ದರ್ಬಾರ ಮಾಡಬೇಕು ಅಲ್ಲವೇ? ನಿಮ್ಮ ಸೇವೆ ಮಾಡಬೇಕು. ಹಾಗಾಗಿ ನೀವು ನನಗದೊಂದು ಅವಕಾಶ ಮಾಡಿಕೊಡಬೇಕು ಎಂದು ಪರೋಕ್ಷವಾಗಿ ಸಿಎಂ ಆಸೆಯನ್ನು ಹೊರ ಹಾಕಿದರು.

    MORE
    GALLERIES

  • 47

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಬಂಡೆ ಹಾರವನ್ನು ಹತ್ತಿ ಹಾಗೂ ಬಟ್ಟೆಗಳಿಂದ ಸಿದ್ಧಪಡಿಸಲಾಗಿತ್ತು. ಮೈಸೂರಿನ ವಿಶೇಷ ಕಲಾವಿದ ಚೇತಿರಾಮ್ ತಂಡದಿಂದ ಬಂಡೆ ಹಾರ ಸಿದ್ಧಪಡಿಸಲಾಗಿತ್ತು ಎಂದು ವರದಿಯಾಗಿದೆ.

    MORE
    GALLERIES

  • 57

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಭಾಷಣದ ವೇಳೆ ಕೆಲ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಇದರಿಂದ ಗರಂ ಆದ ಡಿಕೆಶಿ, ಹೇ ತರ್ಲೆಗಳ ಸುಮ್ಮನಿರಿ, ಮಂಡ್ಯದವರು ಎಂದರೆ ತರ್ಲೆಗಳು ಎಂದು ಅನಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

    MORE
    GALLERIES

  • 67

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಸಿ.ಟಿ.ರವಿಗೆ ಕಾಂಗ್ರೆಸ್ ಇತಿಹಾಸ ಏನು ಗೊತ್ತು? ಪಾಪ ಸಿಟಿ ರವಿಗೆ ಇತಿಹಾಸನೇ ಗೊತ್ತಿಲ್ಲ, ಸಿಟಿ ರವಿ ಮೆಂಟಲ್ ಆಸ್ಪತ್ರೆಗೆ ಸೇರಬೇಕೆಂದು ಈ ಹಿಂದೆಯೇ ಹೇಳಿದ್ದೇನೆ. ಅವರು ತಪ್ಪು ದಾರಿಗೆ ಏಳೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದು ಟೀಕಿಸಿದರು.

    MORE
    GALLERIES

  • 77

    DK Shivakumar: ಕೆಪಿಸಿಸಿ ಅಧ್ಯಕ್ಷರಿಗೆ 'ಬಂಡೆ' ಹಾರ; ಕಲ್ಲು ಪ್ರಕೃತಿ, ಕಡೆದ್ರೆ ಆಕೃತಿ, ಪ್ರೀತಿಸಿದ್ರೆ ಸಂಸ್ಕೃತಿ ಎಂದ ಡಿಕೆಶಿ

    ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಅಭಿಮಾನಿಗಳು ನವಿಲು ಗರಿ ಹಾಕಲಾಗಿತ್ತು. ಈ ಸಂಬಂಧ ದರ್ಶನ್ ಪುಟ್ಟಣ್ಣಯ್ಯಗೆ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು.

    MORE
    GALLERIES