(PHOTOS): ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್​​ನಲ್ಲಿ ರಾಜ್ಯ ಬಿಜೆಪಿ ಶಾಸಕರು

ರಾಜ್ಯ ಬಿಜೆಪಿಯ 80ಕ್ಕೂ ಹೆಚ್ಚು ಶಾಸಕರು ಗುರುಗ್ರಾಮದ ಬಳಿ ಇರುವ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮೂಲಕ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ರೆಸಾರ್ಟ್​ ರಾಜಕಾರಣ ಆರಂಭಿಸಿದೆ ಎನ್ನಲಾಗಿದೆ. ಶಾಸಕರು ತಂಗಿರುವ ಗುರುಗ್ರಾಮದ ಹೋಟೆಲ್​ನಲ್ಲಿ ಬೆಳಿಗ್ಗೆ ಉಪಾಹಾರ ಕೂಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಕೆಲವು ಶಾಸಕರೊಂದಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದು, ರೆಸಾರ್ಟ್​​ನಲ್ಲೇ ಶಾಸಕರು ಸಂಕ್ರಾಂತಿ ಆಚರಣೆ ಮಾಡಲಿದ್ದಾರೆ. ಎಳ್ಳು ಬೆಲ್ಲ ತಂದು ಸಂಕ್ರಾಂತಿ ಆಚರಣೆಗೆ ಸಿದ್ಧತೆ ಮಾಡಲಾಗುತ್ತಿದೆ ಇದರ ಕೆಲವು ಚಿತ್ರಗಳು ನಿಮ್ಮ ನ್ಯೂಸ್ 18 ಕನ್ನಡದಲ್ಲಿ

  • News18
  • |
First published: