ಕರ್ನಾಟಕದಲ್ಲಿ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
2/ 8
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೇಕಾಗುವ ವಸ್ತುಗಳನ್ನು ಈಗಲೇ ಬ್ಯಾಗ್ನಲ್ಲಿಡಿ. ನಾಳೆ ಪರೀಕ್ಷೆ ಬೇಕಾಗುವ ಮುಖ್ಯವಾದ ಪೆನ್ನು ಇನ್ನಿತರ ವಸ್ತುಗಳನ್ನು ನೆನಪಿಸಿ ಇಟ್ಟುಕೊಳ್ಳಿ.
3/ 8
ಪರೀಕ್ಷೆ ಬರೆಯಲು ಪ್ರವೇಶ ಪತ್ರ ಬೇಕು. ಹಾಗಾಗಿ ಒಂದು ಬಾರಿ ಸರಿಯಾಗಿ ಪ್ರವೇಶ ಪತ್ರವನ್ನ ನೋಡಿ. ಯಾವ ಕೇಂದ್ರವೆಂದು ತಿಳಿಯಿರಿ ನಂತರ ಬ್ಯಾಗ್ನ ಸರಿಯಾದ ಜಾಗದಲ್ಲಿ ಅಂದರೆ ಮಳೆಗೆ ಒದ್ದೆಯಾಗದಂತೆ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಹಾಲ್ ಟಿಕೆಟ್ ಇಟ್ಟಿರಿ.
4/ 8
ಪರೀಕ್ಷೆ ಬರೆಯಲು ಮುಖ್ಯವಾಗಿ ಪೆನ್ನು ಬೇಕು. ಹಾಗಾಗಿ ನೀಲಿ ಬಣ್ಣದ ಅಥವಾ ಕಪ್ಪು ಬಣ್ಣದ ಪೆನ್ನು ಇಟ್ಟುಕೊಂಡಿರಿ. ಸರಿಯಾಗಿ ಪೆನ್ನು ಬರೆಯುತ್ತದೆಯೇ ಎಂದು ಇಂದೇ ಪರೀಕ್ಷಿಸಿಕೊಳ್ಳಿ.
5/ 8
ಸ್ಮಾರ್ಟ್ವಾಚ್ ಬಳಕೆ ಬೇಡ. ಈಗಾಗಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ವಾಚ್ ಬಳಕೆ ಮಾಡಬಾರದು ಎಂದು ಹೇಳಲಾಗಿದೆ.
6/ 8
ಪರೀಕ್ಷೆ ಬರೆಯುವ ಸಮಯದ ಬಗ್ಗೆ ಸರಿಯಾಗಿ ಗಮನಿಸಿ. ಆತಂಕ ಗೊಂದಲವಿಲ್ಲದೆ ಪರೀಕ್ಷೆಗೆ ಬರೆಯಿರಿ.
7/ 8
ಮಳೆಗಾಲವಾದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ತೆರಳಲು ಪ್ರಯತ್ನಿಸಿ. ವಾಹನ ವ್ಯವಸ್ಥೆ ಬಗ್ಗೆ ಪೋಷಕರ ಬಳಿ ವಿಚಾರಿಸಲು ಹೇಳಿ