ರಂಗಪ್ಪ ಜೆಡಿಎಸ್ ಮುಖಂಡ. 2018ರ ವಿಧಾನಸಭಾ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹನುಮಂತರಾಯಪ್ಪ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಕಳೆದ 25 ವರ್ಷಗಳಿಂದ ಜನತಾಪರಿವಾರ ಹಾಗೂ ಈಗ ಜೆಡಿಎಸ್ ನಲ್ಲಿದ್ದರು. ಸಂಘಟನೆಯಲ್ಲಿ ಎತ್ತಿದ ಕೈ. ಲೋಕಸಭಾ ಚುನಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡರ ಪರ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಕಳೆದ ಶನಿವಾರ ರಾತ್ರಿ ಇವರು ಸೇರಿದಂತೆ ಜೆಡಿಎಸ್ ನ ಇತರ ಎಂಟು ಮಂದಿ ಶ್ರೀಲಂಕಾದ ಕೊಲೊಂಬೊಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದರು. ಕೊಲೊಂಬೊದ ಶಾಂಗ್ರಿಲಾ ಹೋಟೆಲ್ ನಲ್ಲಿ ಇವರು ತಂಗಿದ್ದರು. ಸೋಮವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಆದರೆ ದುರಾದೃಷ್ಟವಶಾತ್ ಬಾಂಬ್ ಸ್ಫೋಟದಲ್ಲಿ ರಂಗಪ್ಪ ಸಾವನ್ನಪ್ಪಿದ್ದಾರೆ.
8 ನೇ ಮೈಲಿ ನಿವಾಸಿಯಾಗಿದ್ದ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿದ್ದ ಹನುಮಂತರಾಯಪ್ಪ ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಹನುಮಂತರಾಯಪ್ಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ಮುಖಂಡರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಆಕಾಂಕ್ಷಿಯಾಗಿದ್ದರು. ಲೋಕಾಸಭಾ ಚುನಾವಣೆಯಲ್ಲೂ ಜೆಡಿಎಸ್ ಪರ ಕೆಲಸ ಮಾಡಿದ್ದರು. ಬೆಂ.ಉತ್ತರ ಲೋಕಾಸಭಾ ಕ್ಷೇತ್ರದ ಕೃಷ್ಣಭೈರೇಗೌಡರ ಪರ ಪ್ರಚಾರದಲ್ಲಿ ನಿರತರಾಗಿದ್ದರು. ಚುನಾವಣೆ ಮುಗಿದ ಬಳಿಕ ರಿಲ್ಯಾಕ್ಸ್ ಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು. ಭಾನುವಾರ ಬೆಳಿಗಿನ ಜಾವ 2 ಗಂಟೆಗೆ ಮನೆಯಿಂದ ಬೆಂಗಳೂರು ಏರ್ಪೋರ್ಟ್ ಮೂಲಕ ಶ್ರೀಲಂಕಾಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ಮಗ ಚೇತನ್ ಗೆ ಕರೆ ಮಾಡಿ ಶ್ರೀಲಂಕಾ ತಲುಪಿರುವ ಬಗ್ಗೆ ಮಾಹಿತಿ ತಿಳಿಸಿದ್ದರು. ನಾಳೆ ಶ್ರೀಲಂಕಾದಿಂದ ವಾಪಸ್ಸಾಗಬೇಕಿತ್ತು. ಆದರೆ ವಿಧಿವಶ ಆತ್ಮಹುತಿ ಬಾಂಬ್ ಸ್ಪೋಟದಲ್ಲಿ ಮೃತರಾಗಿದ್ದಾರೆ.