Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶಗೊಂಡು ಟಿಪ್ಪರ್ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ, ಟಿಪ್ಪರ್​​ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ.

First published:

  • 17

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಮಂಗಳೂರು: ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಸಿಗ್ನಲ್​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ ನಂತೂರು ವೃತ್ತದಲ್ಲಿ ನಡೆದಿದೆ.

    MORE
    GALLERIES

  • 27

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಮೃತರನ್ನು ಸ್ಯಾಮ್ಯುಯೆಲ್​​​ ಜೇಸುದಾಸ್​​​, ಭೂಮಿಕಾ ಎಂದು ಗುರುತಿಸಲಾಗಿದೆ. ಅತೀ ವೇಗವಾಗಿ ಬಂದ ಟಿಪ್ಪರ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

    MORE
    GALLERIES

  • 37

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಮೃತ ಭೂಮಿಕಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಇಂದು ಕುಂಪಲದಿಂದ ಬೋಳೂರಿಗೆ ವಾಪಸ್​ ಆಗುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ.

    MORE
    GALLERIES

  • 47

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶಗೊಂಡು ಟಿಪ್ಪರ್ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ, ಟಿಪ್ಪರ್​​ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳಕ್ಕೆ‌ ಎಸಿಪಿ ಗೀತಾ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    MORE
    GALLERIES

  • 57

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಪೊಲೀಸರೆಂದು ಹೇಳಿ ಮಹಿಳೆ ಚಿನ್ನದ ಸರ ಎಗರಿಸಿದ ಖದೀಮರು:
    ಬಸ್​​ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಸ್​ ನಿಲ್ದಾಣದಲ್ಲಿ ನಡೆದಿದೆ. ಪೊಲೀಸರೆಂದು ಕಾಳಜಿ‌ ತೋರಿಸುವ ನೆಪದಲ್ಲಿ ಪಾರ್ವತೆಮ್ಮ ಬೋಜಪ್ಪ ಎಂಬ ಮಹಿಳೆ ಬಳಿ ಬಂದ ಖದೀಮರು ಚಿನ್ನದ ಸರ ದೋಚಿ ಎಸ್ಕೇಪ್​ ಆಗಿದ್ದಾರೆ.

    MORE
    GALLERIES

  • 67

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಪಾರ್ವತಮ್ಮ ಅವರು ರೇಷನ್​​ ತರಲು ಬಂದ ಸಂದರ್ಭದಲ್ಲಿ ನಡೆದಿದ್ದು, ಸರ ಕದಿಯುವವರು ಬಂದಿದ್ದಾರೆ. ನೀವು ಚಿನ್ನದ ಸರ ಹಾಕಿಕೊಂಡಿದ್ದೀರಿ. ಸರ ಬಿಚ್ಚಿ ನಿಮ್ಮ ಚೀಲದಲ್ಲಿ ಹಾಕಿಕೊಳ್ಳಿ, ನಾವು ಪೊಲೀಸರು ಅಂತ ಮಹಿಳೆಗೆ ಖದೀಮರು ಹೇಳಿದ್ದಾರೆ.

    MORE
    GALLERIES

  • 77

    Mangaluru: ಸಿಗ್ನಲ್​​​ನಲ್ಲಿ ನಿಂತಿದ್ದ ಸ್ಕೂಟರ್​​ಗೆ ಟಿಪ್ಪರ್​​ ಡಿಕ್ಕಿ; ತಂದೆ-ಮಗಳು ಸ್ಥಳದಲ್ಲೇ ಸಾವು!

    ಆರೋಪಿಗಳ ಮಾತು ನಂಬಿದ ಮಹಿಳೆ ಕುತ್ತಿಗೆಯಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಚೀಲಕ್ಕೆ ಹಾಕಲು ಬಿಚ್ಚಿದ ಸಂದರ್ಭದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಘಟನೆ ಸಂಬಂಧ ಗಂಗಾವತಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಹೆಸರು ಹೇಳಿ ಮಹಿಳೆಯನ್ನು ನಂಬಿಸಿ ಚಿನ್ನದ ಸರ ದೋಚಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES