ಕಂಬಳ ಕ್ಷೇತ್ರಕ್ಕೂ ಸರ್ಕಾರ ಮನ್ನಣೆ ನೀಡಿದೆ. 2018ರಲ್ಲಿ ಪ್ರಖ್ಯಾತ ಕಂಬಳ ಓಟಗಾರ, ಕೊಳಕೆ ಎಕ್ಸ್‌ಪ್ರೆಸ್ ಖ್ಯಾತಿಯ ಇರ್ವತ್ತೂರು ಆನಂದ ಅವರಿಗೆ 40ಕ್ಕೂ ಹೆಚ್ಚು ವರ್ಷಗಳ ಕಾಲದ ಕಂಬಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕೊಳಕೆ ಆನಂದ ಅವರು ವಾಟ್ಸಾಪ್, ಫೇಸ್‌ಬುಕ್ ಇಲ್ಲದ ಕಾಲದಲ್ಲಿ ಮಿಂಚಿ ಜನಮನ ಗೆದ್ದವರು. ಇತ್ತೀಚೆಗೆ ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಮಿಜಾರ್ ಅವರಿಗೂ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. (ಈ ಚಿತ್ರದಲ್ಲಿ ಇರುವುದು ಕೊಳಕೆ ಇರ್ವತ್ತೂರು ಆನಂದ ಮತ್ತು ಅವರ ಸಹಾಯಕ.) (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)