ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.
2/ 10
ಅನಾರೋಗ್ಯ ಹಿನ್ನೆಲೆ ಸೋನಿಯಾ ಗಾಂಧಿ ಸುಮಾರು 20 ನಿಮಿಷಗಳ ಕಾಲ ಪಾದಯಾತ್ರೆಯಲ್ಲಿ ಭಾಗಿಯಾಗ್ತಾರೆ ಎಂದು ಹೇಳಲಾಗಿತ್ತು.
3/ 10
ಆದ್ರೆ ಕಾರ್ಯಕರ್ತರು ಮತ್ತು ಪುತ್ರನ ಹುಮ್ಮಸ್ಸು ಕಂಡ ಸೋನಿಯಾ ಗಾಂಧಿ ಅವರು ಮಧ್ಯಾಹ್ನದವರೆಗೆ ಪಾದಯಾತ್ರೆಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.
4/ 10
ಸೋನಿಯಾ ಗಾಂಧಿ ಅವರ ಎಡ ಮತ್ತು ಬಲ ಭಾಗ ದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡೆಯುತ್ತಿದ್ದಾರೆ. ಪಾದಯಾತ್ರೆ ಆರಂಭದಿಂದಲೂ ಅಮ್ಮನ ಪಕ್ಕದಲ್ಲಿರುವ ರಾಹುಲ್ ಗಾಂಧಿ, ತಾಯಿಯ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದಾರೆ.
5/ 10
ಸುಮಾರು 15 ನಿಮಿಷ ಬಳಿಕ ನಡೆದ ಬಳಿಕ, ಸಾಕು ಅಮ್ಮಾ, ನೀವು ಕಾರ್ನಲ್ಲಿ ಬನ್ನಿ. ನಾವು ನಡೆಯುತ್ತೇವೆ ಎಂದು ಹೇಳಿದರು. ನಂತರ ತಾವೇ ಸೋನಿಯಾ ಗಾಂಧಿ ಅವರನ್ನು ಕಾರ್ ಬಳಿ ಕರೆದುಕೊಂಡು ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದರು.
6/ 10
ಇತ್ತ ರಾಹುಲ್ ಗಾಂಧಿ ಮತ್ತೆ ಕಾರ್ಯಕರ್ತರ ಜೊತೆ ಸೇರಿಕೊಂಡರು. ಕೆಲ ಸಮಯದ ಬಳಿಕ ಸೋನಿಯಾ ಗಾಂಧಿ ಮತ್ತೆ ಪಾದಯಾತ್ರೆ ಸೇರಿಕೊಂಡರು.
7/ 10
ಪಾದಯಾತ್ರೆಯುದ್ದಕ್ಕೂ ಸೋನಿಯಾ ಗಾಂಧಿಯವರು ಸ್ಥಳೀಯ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಅವರ ಜೊತೆಯಲ್ಲಿಯೇ ಮಾತನಾಡುತ್ತ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡು ಬಂದವು.
8/ 10
ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಬಿಚ್ಚು ಹೋಗಿದ್ದ ತಾಯಿ ಅವರ ಶೂ ಲೇಸ್ ಕಟ್ಟಿದರು.
9/ 10
ಪಾದಯಾತ್ರೆ ನಡುವೆ ಜಕ್ಕನಹಳ್ಳಿಯ ಅಮ್ಮಾಸ್ ಕೆಫೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ನೀಡಿದರು. ಕಾಫಿ ಕುಡಿದ ಬಳಿಕ ಸೋನಿಯಾ ಗಾಂಧಿ ನೆರೆದಿದ್ದ ಜನರತ್ತ ಕೈ ಬೀಸಿದರು.
10/ 10
ಮಧ್ಯಾಹ್ನ ಭೋಜನ ವಿರಾಮದವರೆಗೂ ನಡೆಯಲು ಸೋನಿಯಾ ಗಾಂಧಿ ನಿರ್ಧರಿಸಿದ್ದರು. ಸುಸ್ತು ಆಗುತ್ತೆ ಬೇಡಮ್ಮ ಎಂದು ರಾಹುಲ್ ಗಾಂಧಿ ಒತ್ತಾಯ ಮಾಡಿದ್ದರಿಂದ ಸೋನಿಯಾ ಗಾಂಧಿ ಕಾರ್ ಹತ್ತಿದ್ರು.