Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

ಪಂಜಾಬ್, ದೆಹಲಿಯಲ್ಲಿ ಕಾಂಗ್ರೆಸ್​ಗೆ ಎಎಪಿಯೇ ಪ್ರಮುಖ ಎದುರಾಳಿಯಾಗಿದ್ದು, ಈ ರಾಜ್ಯದ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿಲ್ಲ.

  • News18 Kannada
  • |
  •   | Bangalore [Bangalore], India
First published:

  • 17

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ ಒಂದು ವಾರದ ನಂತರ ಸಿದ್ದರಾಮಯ್ಯನವರು ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಮತ್ತು 25 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    MORE
    GALLERIES

  • 27

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ರಾಜ್ಯ ಕಾಂಗ್ರೆಸ್​ ಪಾಳಯದ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ದೇಶದ ಉದ್ದಗಲ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ.

    MORE
    GALLERIES

  • 37

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ನೆಹರು-ಗಾಂಧಿ ಪರಿವಾರ ಸೇರಿದಂತೆ ದೇಶದ ಆರು ರಾಜ್ಯದ ಸಿಎಂಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೃತೀಯ ರಂಗ ರಚನೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಪ್ತ ನಾಯಕರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    MORE
    GALLERIES

  • 47

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ಆದರೆ, ಸಿದ್ದರಾಮಯ್ಯ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಕೆಲವು ನಾಯಕರಿಗೆ ಆಹ್ವಾನ ನೀಡಿಲ್ಲ. ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದಾದ ಕಾರ್ಯಕ್ರಮಕ್ಕೆ ಕೆಲವು ನಾಯಕರಿಗೆ ಆಹ್ವಾನ ನೀಡದಿರುವುದನ್ನು ಹಲವು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

    MORE
    GALLERIES

  • 57

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ತೃತೀಯ ರಂಗದಲ್ಲಿ ಕಾಂಗ್ರೆಸ್​ನ್ನು ಸೇರಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ನ್ನು ಹೊರಗಿಟ್ಟಿದೆ. ಜೊತೆಗೆ ತೆಲಂಗಾಣದಲ್ಲಿ ಟಿಆರ್​​ಎಸ್​ಗೆ ಕಾಂಗ್ರೆಸ್​​ ಪಕ್ಷವೇ ಪ್ರಮುಖ ಎದುರಾಳಿಯಾಗಿದೆ.

    MORE
    GALLERIES

  • 67

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ಉಳಿದಂತೆ ಪಂಜಾಬ್, ದೆಹಲಿಯಲ್ಲಿ ಕಾಂಗ್ರೆಸ್​ಗೆ ಎಎಪಿಯೇ ಪ್ರಮುಖ ಎದುರಾಳಿಯಾಗಿದ್ದು, ಈ ರಾಜ್ಯದ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿಲ್ಲ.

    MORE
    GALLERIES

  • 77

    Karnataka Cabinet Formation: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಇವರಿಗಿಲ್ಲ ಆಹ್ವಾನ! ಕಾರಣವೇನು?

    ಇತ್ತ ಕರ್ನಾಟಕ ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ಪ್ರಾದೇಶಿಕವಾಗಿ ಪ್ರಬಲವಾಗಿರುವ ಜಗನ್ ಮೋಹನ್​ ರೆಡ್ಡಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ನವೀನ್ ಪಟ್ನಾಯಕ್ ಜತೆ ಕೂಡ ಕಾಂಗ್ರೆಸ್ ನೇರ ಸ್ಪರ್ಧೆ ಹೊಂದಿದೆ. ಇಲ್ಲವೇ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅವರ ಪರೋಕ್ಷ ಬೆಂಬಲ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಹ್ವಾನ ನೀಡಿಲ್ಲ.

    MORE
    GALLERIES