Bhagavad Gita: ಪಠ್ಯಕ್ರಮ ಬದಲಾವಣೆ ಇಲ್ಲ, ಈ ವರ್ಷದಿಂದಲೇ ಭಗವದ್ಗೀತೆ ಅಳವಡಿಕೆ: Minister B.C.Nagesh
ಈ ವರ್ಷ ಶೈಕ್ಷಣಿಕ ಪಠ್ಯಕ್ರಮ ಬದಲಾವಣೆ ಮಾಡಲ್ಲ. ಕೆಲ ಸಣ್ಣ ತಿದ್ದುಪಡಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಹೇಳಿದ್ದಾರೆ.
ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದಲೇ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯ ಭಾಗವನ್ನು ಅಳಡಿಸಲಾಗುತ್ತಿದೆ. ಸದ್ಯದ ಕಾಲದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು.
2/ 8
ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಹೇಗೆ ಮತ್ತು ಯಾವ ಪ್ರಮಾಣದಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಬಹುತೇಕ ಪೋಷಕರು ಸಹ ಭಗವದ್ಗೀತೆ ಅಳವಡಿಕೆಗೆ ಸಹಮತ ಸೂಚಿಸಿದ್ದಾರೆ ಎಂದರು.
3/ 8
ನೈತಿಕ ಗುಣ ಬೆಳೆಸುವಂತ ಅಂಶಗಳುಳ್ಳ ರಾಮಾಯಾಣ ಮತ್ತು ಮಹಾಭಾರತದಲ್ಲಿನ ಕಥೆಗಳನ್ನು ಪಠ್ಯದಲ್ಲಿ ಅಳವಡಿಕೆ ಮಾಡಲಾಗುತ್ತದೆ. ಭಗವದ್ಗೀತೆ ಧಾರ್ಮಿಕ ಆಚರಣೆ ಅಲ್ಲ. ಪೂಜಾ ವಿಧಾನವೂ ಅಲ್ಲ.
4/ 8
ಭಗವದ್ಗೀತೆಯ ಸಾರವನ್ನು ಎಲ್ಲ ಧರ್ಮದವರು ಕೇಳಬಹುದು. ಜೀವನಕ್ಕೆ ಬೇಕಾದ ಮಾರ್ಗದರ್ಶನ ಇದರಲ್ಲಿದೆ. ಅಬ್ದುಲ್ ಕಲಾಂ ಅವರು ಸಹ ಭಗವದ್ಗೀತೆಯಲ್ಲಿ ಶಕ್ತಿ ಅಡಗಿದೆ ಎಂದು ಹೇಳಿದ್ದರು.
5/ 8
ಭಗವದ್ಗೀತೆಯ ಯಾವ ಸಾರವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂಬುದನ್ನು ಶೀಘ್ರದಲ್ಲಿಯೇ ನಿರ್ಧರಿಸಲಾಗುವುದು. ಭಗವದ್ಗೀತೆಯನ್ನು ಯಾವ ರೀತಿ ನೈತಿಕ ಶಿಕ್ಷಣದಲ್ಲಿ ಸೇರಿಬೇಕು? ಅದರಲ್ಲಿ ಏನಿರಬೇಕು ಎಂಬುದನ್ನು ತಜ್ಞರು ನಿರ್ಧರಿಸಲಿದ್ದಾರೆ.
6/ 8
ಇನ್ನೂ ಟಿಪ್ಪು ಪಠ್ಯವನ್ನು ತೆಗೆದು ಹಾಕಲಾಗುತ್ತಿದೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಸದ್ಯ ಇರೋ ಪಠ್ಯ ತಪ್ಪಾಗಿದ್ದು. ವೈಭವೀಕರಣ ಕಡಿಮೆ ಮಾಡಲು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ ಎಂದರು.
7/ 8
ಈ ಶೈಕ್ಷಣಿಕ ವರ್ಷದಲ್ಲಿ ಟಿಪ್ಪು ಪಠ್ಯವನ್ನು ತೆಗೆದಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸುಳ್ಳು ಹೇಳುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿ.ಸಿ.ನಾಗೇಶ್ ಆರೋಪಿಸಿದರು.
8/ 8
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪಠ್ಯಕ್ರಮ ಬದಲಾವಣೆ ಮಾಡಲಾಗಿತ್ತು. ಆಗ ಸರಿ ಇರೋದನ್ನು ನಾವು ಒಪ್ಪಿಕೊಂಡಿದ್ದೇವೆ. ಈಗಲೂ ಪಠ್ಯಕ್ರಮ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.