ಈ ಘೋಷಣೆ ಬೆನ್ನಲ್ಲೇ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಎಸ್.ಎಂ.ಕೃಷ್ಣ ರಾಜಕೀಯ ನಿವೃತ್ತಿ ತೆಗೆದುಕೊಂಡ್ರಾ ಅನ್ನೋ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಕೇಳಿ ಬಂದಿತ್ತು.
2/ 7
ನಿವೃತ್ತಿ ಘೋಷಣೆಯ ದಿನದಂದು ಎಸ್.ಎಂ.ಕೃಷ್ಣ ಈ ಪ್ರಶ್ನೆಗೆ ಉತ್ತರ ನೀಡಿದ್ದರು. ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಿರೋದು ಯಾಕೆ ಎಂಬುದನ್ನು ಹೇಳಿದರು.
3/ 7
ಹೊಸ ವರ್ಷದಂದು ಸಂದೇಶ ನೀಡುವ ಹಿನ್ನೆಲೆ ಸುದ್ದಿಗೋಷ್ಠಿ ಕರೆದಿದ್ದ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿರೋದನ್ನು ಘೋಷಣೆ ಮಾಡಿದರು.
4/ 7
ನನಗೀಗ 90 ವರ್ಷ. 50 ವರ್ಷದಂತೆ ನಟಿಸಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಕ್ರಮೇಣ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.
5/ 7
ನಮ್ಮ ವಯಸ್ಸಿನ ಬಗ್ಗೆ ನಮಗೆ ತಿಳಿದಿರಬೇಕು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಹಿನ್ನೆಲೆ ಎಸ್.ಎಂ.ಕೃಷ್ಣ ಸಾರ್ವಜನಿಕ ಜೀವನದಿಂದ ದೂರ ಇಳಿದಿದ್ದಾರೆ.
6/ 7
ನಾನಾಗಿಯೇ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ. ಇಲ್ಲಿ ಪಕ್ಷ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಪ್ರಶ್ನೆ ಮೂಡಲ್ಲ ಎಂದು ಎಸ್.ಎಂ.ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
7/ 7
ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದ ಮಾತ್ರಕ್ಕೆ ಸನ್ಯಾಸಿ ಆಗುತ್ತಿಲ್ಲ. ಪಕ್ಷ ಸಂಘಟನೆಯ ವಿಚಾರವಾಗಿ ಯಾರೇ ಸಲಹೆ ಕೇಳಿದ್ರೂ ನೀಡಲು ಸಿದ್ಧ ಎಂದು ತಿಳಿಸಿದರು.