Siddaramaiah: ಬೆಲೆ ಏರಿಕೆ ಬಿಸಿ ಸಂಕಷ್ಟದಲ್ಲಿ ಮುದ್ರಣ ಮಾಧ್ಯಮ; ಪ್ರಧಾನಿಗೆ ಸಿದ್ದರಾಮಯ್ಯ ಪತ್ರ
ಮುದ್ರಣ ಕಾಗದದ (Printing Paper) ಏರಿಕೆಯಿಂದಾಗಿ ಮುದ್ರಣ ಮಾಧ್ಯಮಗಳು ಭಾರೀ ಕಷ್ಟ ಅನುಭವಿಸುವಂತೆ ಆಗಿದೆ ಎಂದು ಪತ್ರಿಕಾ ರಂಗದ ಸಮಸ್ಯೆಗಳ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ ಮುದ್ರಣ ಕಾಗಡದ ಬೆಲೆ ಕೂಡ ತೀವ್ರವಾಗಿ ಏರಿಕೆ ಕಂಡಿದೆ. ಇದರಲ್ಲಿ ಮುದ್ರಣ ಮಾಧ್ಯಮಗಳು ಹೊರತಾಗಿಲ್ಲ.
2/ 8
ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಮುದ್ರಣ ಮಾಧ್ಯಮಗಳು ಭಾರೀ ಕಷ್ಟ ಅನುಭವಿಸುವಂತೆ ಆಗಿದೆ ಎಂದು ಪತ್ರಿಕಾ ರಂಗದ ಸಮಸ್ಯೆಗಳ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ
3/ 8
ಮುದ್ರಣ ಕಾಗದದ ಏರಿಕೆಯಿಂದ ಪ್ರತಿಕಾ ಸಂಸ್ಥೆಗಳಿಗೆ ಸರಳವಾಗಿ ಮುದ್ರಣ ಕಾಗದ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ನೀತಿ ರೂಪಿಸಬೇಕು. ಈ ಮೂಲಕ ಮುದ್ರಣ ಮಾಧ್ಯಮದ ನೆರವಿಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ,
4/ 8
ಪತ್ರಿಕೆಗಳು ಜನರ ಧ್ವನಿಯಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಮಾಧ್ಯಮ ಇದೀಗ ಕಷ್ಟಕ್ಕೆ ಒಳಗಾಗಿದೆ. ಪ್ರತಿಕೆಗಳಿಗೆ ಕಾಗದ ಪೂರೈಕೆ ವ್ಯತ್ಯಾಯದಿಂದ ಮಾಧ್ಯಮ ತತ್ತರಿಸಿದೆ.
5/ 8
ಪತ್ರಿಕಾಲಯಗಳನ್ನು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆ ಪ್ರಮಾಣ ಇದೀಗ ಶೇ 68ರಷ್ಟು ಆಗಿದೆ. ಜಿಎಸ್ಟಿ ಜಾರಿಗೆ ಬರುವ ಮುನ್ನ ಒಟ್ಟಾರೆ ಶೇ. 3ರಷ್ಟು ಮಾತ್ರ ತೆರಿಗೆ ಇತ್ತು.
6/ 8
ಸದ್ಯ ಈ ತೆರಿಗೆ ಸರಿದೂಗಿಸಲು ಪತ್ರಿಕೆಗಳು ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತು ಪ್ರಮಾಣ ಕೂಡ ಕಡಿಮೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆ ನಡೆಸುವುದು ಕಷ್ಟವಾಗಿದೆ
7/ 8
ಕೋವಿಡ್, ಇಂಧನ ವೆಚ್ಚ ಪರಿಣಾಮ, ಕಚ್ಛಾ ಪದಾರ್ಥಗಳ ಕೊರತೆಯಿಂದ ಪತ್ರಿಕೆಗಳನ್ನು ಮುದ್ರಿಸಲು ಹೆಚ್ಚು ಖರ್ಚು ಆಗುತ್ತಿದ್ದು, ಆದಾಯ ಮಾತ್ರ ಕಡಿಮೆ ಇದೆ. ಇದರಿಂದ ಅನೇಕ ಪತ್ರಿಕೆಗಳು ನಷ್ಟದ ಹಾದಿಯಲ್ಲಿವೆ.
8/ 8
ಈ ಹಿನ್ನಲೆ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಕೇಂದ್ರ ಸರ್ಕಾರ ಪತ್ರಿಕಾ ರಂಗದ ಸಮಸ್ಯೆಗೆ ಧ್ವನಿಯಾಬೇಕಿದೆ ಎಂದು ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.