Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

ನಿನ್ನೆ ಸಿದ್ದರಾಮ್ಯಯ ಅವರು ಕೊಪ್ಪಳದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜನ ತಳ್ಳಾಟ, ಕೈ ಹಿಸುಕಿದ ಪರಿಣಾಮ ಸಿದ್ದು ಅವರು ಎಡಗೈಗೆ ಬ್ಯಾಂಡೇಜ್​ ಹಾಕಿಕೊಂಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಗೆ ಪೆಟ್ಟಾಗಿದ್ದು, ಕೈಗೆ ಬ್ಯಾಂಡೇಜ್​​ ಹಾಕಿಕೊಂಡೆ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂದು ಕೋಲಾರ ನಗರದ ಹೊರವಲಯದಲ್ಲಿ ನಡೆಯುತ್ತಿರುವ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES

  • 27

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಇಂದು ಬೆಂಗಳೂರಿನ ತಮ್ಮ ನಿವಾಸದಿಂದ ಹೊರ ಬಂದ ಸಿದ್ದರಾಮ್ಯಯ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು. ಸಿದ್ದರಾಮಯ್ಯ ಅವರೊಂದಿಗೆ ಜಮೀರ್​ ಕೂಡ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಿದ್ದು ಅವರ ಕೈಗೆ ಬ್ಯಾಂಡೇಜ್​ ಹಾಕಿರುವುದು ಕಂಡು ಬಂದಿತ್ತು.

    MORE
    GALLERIES

  • 37

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಆಗಮಿಸಿದ್ದು, ರಾಹುಲ್​ ಅವರನ್ನು ಸ್ವಾಗತ ಮಾಡಲು ಸಿದ್ದರಾಮಯ್ಯ ಅವರೊಂದಿಗೆ ಪಕ್ಷದ ನಾಯಕರು ತೆರಳಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಬ್ಯಾಡೇಜ್​ ಹಾಕಿಕೊಂಡಿದ್ದನ್ನು ಗಮನಿಸಿದ ರಾಹುಲ್​ ಗಾಂಧಿ ಅವರು ಕೂಡ ಸಿದ್ದು ಅವರ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಕೈ ತುಂಬಾ ನೋವಿದೆ ಎಂದ ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ಪಡೆದುಕೊಳ್ಳಲು ರಾಹುಲ್​ ಸಲಹೆ ನೀಡಿದ್ದಾರೆ.

    MORE
    GALLERIES

  • 47

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಇನ್ನು, ನಿನ್ನೆ ಸಿದ್ದರಾಮ್ಯಯ ಅವರು ಕೊಪ್ಪಳದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜನ ತಳ್ಳಾಟ, ಕೈ ಹಿಸುಕಿದ ಪರಿಣಾಮ ಸಿದ್ದು ಅವರು ಎಡಗೈಗೆ ಬ್ಯಾಂಡೇಜ್​ ಹಾಕಿಕೊಂಡಿದ್ದಾರೆ. ಕೈ ನೋವಿದ್ದರೂ ಸಿದ್ದರಾಮಯ್ಯ ಅವರು ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಎಚ್ ಮುನಿಯಪ್ಪ ಕುಳಿತುಕೊಂಡಿದ್ದರು.

    MORE
    GALLERIES

  • 57

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಕುರಿತ ವಿಚಾರ ಕುರಿತಂತೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕ ಹರಿಪ್ರಸಾದ್​​, ಕೋಲಾರ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು, ಈಗಾಗಲೇ ವರುಣಾದಲ್ಲಿ ನಿಲ್ಲುವ ತೀರ್ಮಾನವನ್ನು ಮಾಡಿದ್ದಾರೆ, ಉಳಿದದ್ದು ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ.

    MORE
    GALLERIES

  • 67

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಜಗದೀಶ್​ ಶೆಟ್ಟರ್​ ಜೊತೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್ ಸೇರ್ಪಡೆಗೆ ಮುಕ್ತ ಸ್ವಾಗತ ನೀಡಿದ್ದು, ನಿಮಗೆ ಕಾಂಗ್ರೆಸ್ ನಿಂದ ಎಲ್ಲಾ ಗೌರವ ಇದೆ ಎಂದು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 77

    Siddaramaiah: ಅರೆರೇ ಇದೇನಾಯ್ತು! ಸಿದ್ದರಾಮಯ್ಯ ಕೈಗೆ ಬ್ಯಾಂಡೇಜ್​​

    ಇತ್ತ ಕಾಂಗ್ರೆಸ್ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಶಾಸಕ ರಮೇಶ್​ ಕುಮಾರ್ ಅವರು ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಂತೆ ಕಂಡು ಬಂತು. ಜೈ ಭಾರತ್ ಸಮಾವೇಶದ ವೇದಿಕೆ ಮೇಲಿನ ಮೂರನೇ ಸಾಲಿನಲ್ಲಿ ರಮೇಶ್​ ಕುಮಾರ್ ಕುಳಿತುಕೊಂಡಿದ್ದರು, ಇತ್ತ ಕೆಎಚ್​ ಮುನಿಯಪ್ಪ ಮೊದಲ ಸಾಲಿನಲ್ಲಿ ರಾಹುಲ್​ ಗಾಂಧಿ ಅವರೊಂದಿಗೆ ಕುಳಿತಿದ್ದರು. ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧೆ ಮಾಡದ ಕಾರಣ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

    MORE
    GALLERIES