Photos: ಸ್ವಕ್ಷೇತ್ರದಲ್ಲಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ ಸಿದ್ದರಾಮಯ್ಯ
ಮಲಪ್ರಭೆ ಉಕ್ಕಿ ಹರಿದ ಪರಿಣಾಮ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಬದಾಮಿ ಕ್ಷೇತ್ರದ ನೆರೆ ಸಂತ್ರಸ್ತರನ್ನು ಬದಾಮಿ ಶಾಸಕ ಸಿದ್ದರಾಮಯ್ಯ ಭೇಟಿಯಾಗಿ ಅವರ ಸಮಸ್ಯೆ ಆಲಿಸಿದರು. ಬಲಗಣ್ಣಿನ ಆಪರೇಷನ್ನಿಂದಾಗಿ ತಮ್ಮ ಕ್ಷೇತ್ರದ ಜನರನ್ನು ಭೇಟಿಯಾಗದ ಹಿನ್ನೆಲೆ ಅವರು ಇಂದು ಸ್ವಕ್ಷೇತ್ರ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರ ಕಷ್ಟವನ್ನು ಆಲಿಸಿದರು.
ಭಾರೀ ಮಳೆ ಪ್ರವಾಹಕ್ಕೆ ತತ್ತರಿಸಿದ ತಮ್ಮ ಕ್ಷೇತ್ರದ ಪ್ರವಾಹ ಸಂತ್ರಸ್ತರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ, ಅವರಿಗೆ ಪುನರ್ವಸತಿ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ
2/ 8
ಮೃತಪಟ್ಟವರಿಗೆ 5 ಲಕ್ಷ, ಸಂಪೂರ್ಣ ಮನೆ ಹಾನಿಗೆ 5ಲಕ್ಷ, ಅಗತ್ಯ ಖರ್ಚುಗೋಸ್ಕರ 10ಸಾವಿರ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಇವನ್ನು ನೆರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು
3/ 8
ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ಅವರು ಸಮೀಪದ ಮರು ವಸತಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು
4/ 8
ಮೃತಪಟ್ಟವರಿಗೆ 5 ಲಕ್ಷ, ಸಂಪೂರ್ಣ ಮನೆ ಹಾನಿಗೆ 5ಲಕ್ಷ, ಅಗತ್ಯ ಖರ್ಚುಗೋಸ್ಕರ 10ಸಾವಿರ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಇವನ್ನು ನೆರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು
5/ 8
ಕ್ಷೇತ್ರದ ಪ್ರವಾಹ ಪರಿಸ್ಥಿತಿ ಕುರಿತು ಅಧಿವೇಶನದಲ್ಲಿ ಧ್ವನಿಯೆತ್ತಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ.
6/ 8
ಯಾವಾಗಲೂ ನಾನು ನಿಮ್ಮೊಂದಿಗೆ ಇರುತ್ತೇನೆ. ಇದು ನನ್ನ ಕರ್ತವ್ಯ. ನಿಮ್ಮ ಕೆಲಸ ಆಗುವವರೆಗೂ ಸಿಎಂ, ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತೇನೆ ಎಂದು ಭರವಸೆ ನೀಡಿದರು.
7/ 8
ಕಳೆದ ನೂರು ವರ್ಷಗಳಲ್ಲಿ ಕಾಣದಂತಂಹ ಭೀಕರ ಪ್ರವಾಹಕ್ಕೆ ರಾಜ್ಯ ತುತ್ತಾಗಿದೆ. ಪ್ರವಾಹ ಬಂದು 15 ದಿನ ಕಳೆದಿದೆ. ಕೇಂದ್ರದಿಂದ ಒಂದೇ ಒಂದು ರೂಪಾಯಿ ಬಿಡಿಗಾಸು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
8/ 8
ಮಲಪ್ರಭಾ ನದಿಗೆ ಬದಾಮಿಯ ಹತ್ತಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದವು. ಪ್ರವಾಹ ಸಂದರ್ಭದಲ್ಲಿ ವಿಶ್ರಾಂತಿಯಲ್ಲಿದ್ದ ಕಾರಣ ಅವರು ವೈದ್ಯರ ಸೂಚನೆಯಂತೆ ಕ್ಷೇತ್ರಕ್ಕೆ ಆಗಮಿಸಿರಲಿಲ್ಲ,