ಚಳಿಗಾಲದ ಅಧಿವೇಶನದ ಬಳಿಕ ಅಂದ್ರೆ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಬಸ್ ಯಾತ್ರೆ ಆರಂಭಿಸಲಿದ್ದಾರೆ. ಈ ಮೂಲಕ 224 ಕ್ಷೇತ್ರಗಳಿಗೂ ಭೇಟಿ ನೀಡುವ ಪ್ಲಾನ್ ಕಾಂಗ್ರೆಸ್ ಮಾಡಿಕೊಂಡಿದೆ.
2/ 7
ಸಿದ್ದರಾಮಯ್ಯ ಕಂಡೀಷನ್
ಬಸ್ ಯಾತ್ರೆಗೂ ಮುನ್ನ ಟಿಕೆಟ್ ಘೋಷಣೆ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹಾಕ್ತಿದ್ದಾರಂತೆ. ಬಸ್ ಯಾತ್ರೆ ಹಿನ್ನೆಲೆ ಕನಿಷ್ಠ 100 ಕ್ಷೇತ್ರಗಳಿಗಾದ್ರೂ ಟಿಕೆಟ್ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
3/ 7
ಪ್ರತಿ ಕ್ಷೇತ್ರದಲ್ಲಿ ಮೂರರಿಂದ ಐದು ಆಕಾಂಕ್ಷಿಗಳಿದ್ದಾರೆ. ಇದರಿಂದ ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಲಿದೆ. ಜನ ಸೇರಿಸೋ ವಿಚಾರದಲ್ಲೂ ಅಭ್ಯರ್ಥಿ ಯಾರು ಅನ್ನೋದು ತೊಡಕಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಂತೆ.
4/ 7
ಟಿಕೆಟ್ ಘೊಷಣೆ ಮಾಡಿದರೆ ಒಂದು ರೌಂಡ್ ಅಧಿಕೃತ ಚುನಾವಣಾ ಪ್ರಚಾರ ಮಾಡಿದಂತಾಗುತ್ತದೆ. ಇಲ್ಲದಿದ್ದರೆ ಯಾರ ಪರ ನಾವು ಮಾತನಾಡುವುದು ಎನ್ನುವುದು ಗೊತ್ತಾಗಲ್ಲ.
5/ 7
ಇದರಿಂದ ಕಾರ್ಯಕರ್ತರಿಗೂ ಗೊಂದಲ ಉಂಟಾಗಲಿದೆ ಎಂಬ ಕಾರಣಗಳನ್ನು ಹೈಕಮಾಂಡ್ ಮುಂದೆ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.
6/ 7
ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ
ಕಳೆದ ತಿಂಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದರು. ಅದರಂತೆ ಪ್ರತಿ ಕ್ಷೇತ್ಕಕ್ಕೂ ನಾಲ್ಕರಿಂದ ಐದು ಜನರು ಅರ್ಜಿ ಸಲ್ಲಿಸಿದ್ದಾರೆ.
7/ 7
ಹಾಗಾಗಿ ಕಾಂಗ್ರೆಸ್ಗೆ ಯಾರನ್ನೂ ಆಯ್ಕೆ ಮಾಡಬೇಕು ಅನ್ನೋ ಗೊಂದಲ ನಿರ್ಮಾಣವಾಗಿದೆ. ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಖಚಿತ ಎಂದು ತಿಳಿದು ಬಂದಿದೆ.