(Photos) ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರ ಮಾತಿನ ಝಲಕ್​

ಈ ಬಾರಿಯ ಉಪಚುನಾವಣೆಯನ್ನು ಪ್ರತಿಷ್ಟೆಯ ಕಣವಾಗಿ ಸ್ವೀಕರಿಸಿದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಪಕ್ಷ ಬಿಜೆಪಿ ವಿರುದ್ಧ ಅಬ್ಬರದ ಪ್ರಚಾರ ನಡೆಸಿದವು. ಅದರಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಂತೂ ಬಳ್ಳಾರಿ, ಜಮಖಂಡಿಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಿ ಎದುರಾಳಿಗಳಲ್ಲಿ ಭಯ ಹುಟ್ಟಿಸಿದರು. ರೆಡ್ಡಿ-ಶ್ರೀರಾಮುಲು- ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಈ ಉಪಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ತಮ್ಮ ಮೈತ್ರಿ ಮೂಲಕ ಬಿಜೆಪಿಯನ್ನು ರಾಜ್ಯದಿಂದ ದೂರ ಇಡುತ್ತೇವೆ ಎಂದರು. ಬಹಿರಂಗದ ಪ್ರಚಾರದ ಕಾವಿನ ಬಳಿಕ ನಾಳೆ ಐದು ಕ್ಷೇತ್ರಗಳು ನಾಳೆ ಮತದಾನಕ್ಕೆ ಸಿದ್ದವಾಗಿದೆ. ಈ ನಡುವೆ ಸಿದ್ದರಾಮಯ್ಯ ಯಾವ ರೀತಿ ಪ್ರಚಾರ ನಡೆಸಿದರು ಎಂಬ ಪೋಟೊಗಳ ಝಲಕ್​ ಇಲ್ಲಿದೆ,

  • News18
  • |
First published: