PHOTOS: Shivakumara swamiji passes away: ಶತಾಯುಷಿ ಸಿದ್ದಗಂಗಾ ಶ್ರೀಗಳ ಅಪರೂಪದ ಚಿತ್ರಪಟಗಳು

ಶತಾಯುಷಿ, ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. 111 ವರ್ಷಗಳ ತುಂಬು ಜೀವನ ನಡೆಸಿದ ಅವರಿಗೆ ಅವರೇ ಸಾಟಿ. ಸಿದ್ದಗಂಗಾ ಶ್ರೀಗಳು ಅಂದರೆ ಯಾರೂ ಅವರನ್ನು ಮಾನವನಂತೆ ಕಾಣುವುದೇ ಇಲ್ಲ. ಇವತ್ತಿಗೂ ಅದೊಂದು ಮಹಾನ್ ಶಕ್ತಿ. ಆ ಶಕ್ತಿಯ ಪಾದ ಮುಟ್ಟಿದರೆ ಸಾಕು, ನಮಗೆ ಕೋಟಿ ಜನ್ಮದ ಪುಣ್ಯ ಸಿಗುತ್ತೆ ಅಂತಾರೆ ಕೋಟಿ ಕೋಟಿ ಭಕ್ತರು. ಅದರಲ್ಲೂ ಬಡವರ ಮೇಲೆ ಅವರಿಗಿದ್ದ ಅಪಾರ ಮಮತೆ, ವಾತ್ಸಲ್ಯ, ಮಮಕಾರ, ಪ್ರೀತಿಯ ಮಂದೆ ಇಡೀ ಮಾನವಕುಲವೇ ಶರಣಾಗಿದೆ. ತಮ್ಮ ಅಮೋಘ ದಾಸೋಹ ಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಿ, ವಿದ್ಯೆಯ ಬೆಳಕನ್ನು ಹಚ್ಚಿ ಮತ್ತು ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟ ದೈವ ಸಿದ್ದಗಂಗಾ ಶ್ರೀಗಳು.

  • News18
  • |
First published: