Liquor Vendors Strike: ಮದ್ಯ ಪ್ರಿಯರಿಗೆ ಶಾಕ್; ರಾಜ್ಯದಲ್ಲಿ ಮೇ 19ರವರೆಗೆ ಸಿಗೋದಿಲ್ಲ ಎಣ್ಣೆ
ಉಡುಪಿ (ಮೇ 5): ನಾಳೆಯಿಂದ ಮೇ 19 ರವರೆಗೂ ಮದ್ಯ ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದು, ಹೊಸಪೇಟೆ, ಬೆಳಗಾವಿ, ಮೈಸೂರು, ಮಂಗಳೂರು ವಿಭಾಗದಲ್ಲಿ ಮದ್ಯ ಸಿಗೋದಿಲ್ಲ
ಈ ಕುರಿತು ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಿಸಿದ್ದಾರೆ. KSPCL MD ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
2/ 8
ಒಂದು ದಿನ ಮದ್ಯ ಖರೀದಿ ಮಾಡದಿದ್ರೆ ರಾಜ್ಯ ಸರ್ಕಾರಕ್ಕೆ 70 ಕೋಟಿ ರೂಪಾಯಿ ನಷ್ಟವಾಗುತ್ತೆ. ಹೀಗಾಗಿ ವಿಭಾಗ ಮಟ್ಟದಲ್ಲಿ ಮದ್ಯ ಖರೀದಿಯನ್ನು ನಿಲ್ಲಿಸಲು ನಿರ್ಧಾರ ಮಾಡಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
3/ 8
ನಾಳೆ ಕಲಬುರಗಿ ವಿಭಾಗದಲ್ಲಿಯೂ ಮದ್ಯ ಮಾರಾಟಗಾರರಿಂದ ಮುಷ್ಕರ ಮಾಡಲಾಗುತ್ತಿದೆ. ಹೊಸಪೇಟೆ, ಬೆಳಗಾವಿ, ಮೈಸೂರು, ಮಂಗಳೂರು ವಿಭಾಗದಲ್ಲಿಯೂ ಮದ್ಯ ಸಿಗಲ್ಲ. ಮೇ ತಿಂಗಳ 19ನೇ ತಾರೀಖಿನವರೆಗೂ ನಿರಂತರವಾಗಿ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
4/ 8
ಮುಷ್ಕರ ಎಲ್ಲೆಲ್ಲಿ ಯಾವಾಗ? : ಮೇ 6 ರಂದು ಅಂದ್ರೆ ನಾಳೆ ಕಲುಬುರಗಿ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಮುಷ್ಕರ ನಡೆಯಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
5/ 8
ಮೇ 10 ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿಯಲ್ಲಿ ನಡೆಯಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
6/ 8
ಮೇ 12 ರಂದು ಮೈಸೂರು ವಿಭಾಗದ ಜಿಲ್ಲೆಗಳಾದ, ಮೈಸೂರ, ಚಿಕ್ಕಮಗಳೂರು, ಹಾಸನ, ಮಂಡ್ಯ ಹಾಗೂ ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ದಲ್ಲಿ ಮುಷ್ಕರ ನಡೆಯಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
7/ 8
ಮೇ 17 ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರಲ್ಲಿ ಮುಷ್ಕರ ನಡೆಯಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
8/ 8
ಮೇ 19 ರಂದು ಬೆಂಗಳೂರು ನಗರ ವಿಭಾಗದ KSBCL ಡಿಪೋಗಳಲ್ಲಿ ಮದ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)