Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

ದುರ್ದೈವ ಸಂಗತಿ ಏನೆಂದರೆ, ವಿಶ್ವಕರ್ಮ ಸಮಾಜದವರು ಕಷ್ಟಪಟ್ಟು ಸಮುದಾಯ ಭವನವನ್ನು ಕಟ್ಟಿದ್ದರು. ಇದು ಒಂದು ರೀತಿಯಲ್ಲಿ ಕೊರಗು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

First published:

  • 17

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ಶಿವಮೊಗ್ಗ: ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಜೋಡಿ ಕೊಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಸಮುದಾಯ ಭವನ ನಿರ್ಮಾಣಕ್ಕೆ ಬಂದ ಕೂಲಿ ಕಾರ್ಮಿಕರ ಬರ್ಬರ ಹತ್ಯೆ ನಡೆಸಲಾಗಿದ್ದು, ಮೃತರನ್ನು ಮಂಜಪ್ಪ (45) ಬೀರಪ್ಪ (46) ಎಂದು ಗುರುತಿಸಲಾಗಿದೆ.

    MORE
    GALLERIES

  • 27

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ತೀರ್ಥಹಳ್ಳಿಯ ಕುರುವಳ್ಳಿ ಸಮೀಪದ ನಿರ್ಮಾಣ ಮಾಡಲಾಗುತ್ತಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಘಟನೆ ನಡೆದಿದ್ದು, ಮೃತ ಇಬ್ಬರು ಕೂಲಿ ಕಾರ್ಮಿಕರು ದಾವಣಗೆರೆ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 37

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ಇನ್ನು, ಕುಡಿದ ಅಮಲಿನಲ್ಲಿ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹಣದ ವ್ಯವಹಾರದಲ್ಲಿ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 47

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ತಲೆಯ ಮೇಲೆ ಕಲ್ಲು ಎತ್ತುಹಾಕಿ ಇಬ್ಬರು ಕೂಲಿ ಕಾರ್ಮಿಕರನ್ನು ಕೊಲೆ ಮಾಡಲಾಗಿದ್ದು, ರಾಜಪ್ಪ ಎಂಬಾತ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ಇನ್ನು, ನಿರ್ಮಾಣ ಮಾಡುತ್ತಿರುವ ವಿಶ್ವಕರ್ಮ ಸಮುದಾಯ ಭವನದ ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಇದೇ ತಿಂಗಳ 25 ರಂದು ಉದ್ಘಾಟನೆ ನಡೆಯಬೇಕಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಮಲೆನಾಡಿನ ತೀರ್ಥಹಳ್ಳಿಗೂ ಇವರಿಗೂ ಸಂಬಂಧವಿಲ್ಲ. ಇವರು ದಾವಣಗೆರೆ ಕಡೆಯ ಕಾರ್ಮಿಕರು. ಕುಡಿದ ಅಮಲಿನ ಹೊಡೆದಾಟ ಮಾಡಿಕೊಂಡು ಸತ್ತಿದ್ದಾರೆ. ದುರ್ದೈವ ಸಂಗತಿ ಏನೆಂದರೆ, ವಿಶ್ವಕರ್ಮ ಸಮಾಜದವರು ಕಷ್ಟಪಟ್ಟು ಸಮುದಾಯ ಭವನವನ್ನು ಕಟ್ಟಿದ್ದರು. ಇದು ಒಂದು ರೀತಿಯಲ್ಲಿ ಕೊರಗು. ಇನ್ನು ಎರಡು ದಿನಗಳಲ್ಲಿ ಉದ್ಘಾಟನೆಗೊಳ್ಳಲಿದ್ದ ಕಟ್ಟಡ ಇದು‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 77

    Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್​ ಮರ್ಡರ್​​; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ

    ಅಲ್ಲದೇ, ನಾನು ಒಂದು ಹೋಮ ಮಾಡಿಸಿ ಎಂದು ಅವರಿಗೆ ಹೇಳಿದ್ದೇನೆ. ಇದು ಒಬ್ಬ ವ್ಯಕ್ತಿಗೆ ಸೇರಿದ್ದ ಕಟ್ಟಡ ಅಲ್ಲ ಸಮಾಜಕ್ಕೆ ಸೇರಿದ ಕಟ್ಟಡ. ಕುಡಿದ ಅಮಲಿನಲ್ಲಿ ಈ ರೀತಿ ಮಾಡಿಕೊಂಡಿದ್ದಾರೆ. ಒಬ್ಬನಿಗೆ ಇನ್ನೂ ಕೂಡ ಮತ್ತು ಇಳಿದಿಲ್ಲ. ಪೊಲೀಸರ ತನಿಖೆ ನಂತರ ಗಾಂಜಾನೋ ಅಥವಾ ಎಣ್ಣೆಯನ್ನು ಬಹಿರಂಗ ಆಗಲಿದೆ ಎಂದು ತಿಳಿಸಿದ್ದಾರೆ.

    MORE
    GALLERIES