Hijab ಧರಿಸಿ ಬಂದಿದ್ದಕ್ಕೆ ಪರೀಕ್ಷೆಗೆ ನಿರಾಕರಣೆ: ಕಣ್ಣೀರಿಟ್ಟು ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿನಿ
ಕರ್ನಾಟಕ ಹೈಕೋರ್ಟ್ ತರಗತಿಯ ಕೋಣೆಯೊಳಗೆ ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ತೀರ್ಪು ನೀಡಿದೆ. ಈ ಹಿನ್ನೆಲೆ ವಿದ್ಯಾರ್ಥಿನಿಯರು ಹಿಜಾಬ್ ಅಥವಾ ಬುರ್ಕಾ ತೆಗೆದು ತರಗತಿ ಅಥವಾ ಪರೀಕ್ಷೆಗೆ ಹಾಜರಾಗಬೇಕಿದೆ.
ನ್ಯಾಯಾಲಾಯದ ಆದೇಶದಂತೆ ರಾಜ್ಯದಲ್ಲಿ SSLC ಪರೀಕ್ಷೆಗಳು ನಡೆದಿವೆ. ಅದೇ ರೀತಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಯತ್ತಿವೆ. ಹಿಜಾಬ್ ಪರ ಹೋರಾಟಗಾರ್ತಿಯರು ಪರೀಕ್ಷೆಗೆ ಗೈರಾಗಿದ್ದಾರೆ.
2/ 8
ಇದೀಗ ಶಿವಮೊಗ್ಗದ ವಿದ್ಯಾರ್ಥಿನಿ ತನಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಎಂದು ವಿಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ಶಾಹಿನ್ ಆಕ್ರೋಶ ಹೊರ ಹಾಕಿರುವ ವಿದ್ಯಾರ್ಥಿನಿ. ಶಿವಮೊಗ್ಗದ ಡಿವಿಎಸ್ ಕಾಲೇಜಿನ ಕೊನೆಯ ವರ್ಷದ ಬಿಎ ಪರೀಕ್ಷೆಗಾಗಿ ಶಾಹಿನ್ ಆಗಮಿಸಿದ್ದರು. ನ್ಯಾಯಲಯದ ಆದೇಶದಂತೆ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದ ಕಾರಣ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. (ಸಾಂದರ್ಭಿಕ ಚಿತ್ರ)
4/ 8
ಆಡಳಿತ ಮಂಡಳಿ ನಿರ್ಧಾರ ವಿರುದ್ಧ ವಿಡಿಯೋ ಮಾಡಿರುವ ಶಾಹಿನ್ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಸಾಂದರ್ಭಿಕ ಚಿತ್ರ)
5/ 8
ನಾನು ಬಿಎ ಕೊನೆಯ ವರ್ಷದ ವಿದ್ಯಾರ್ಥಿನಿ. ಹಿಜಾಬ್ ಧರಿಸಿದ್ದ ಕಾರಣಕ್ಕೆ ನನಗೆ ತರಗತಿ ಪ್ರವೇಶಿಸಲು ಸಹ ಅನುಮತಿ ನೀಡುತ್ತಿಲ್ಲ ಎಂದು ಶಾಹಿನ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ನನ್ನ ಎಲ್ಲಾ ಸ್ನೇಹಿತರು ಪರೀಕ್ಷೆ ಬರೆಯುತ್ತಿದ್ದಾರೆ. ಹಿಜಾಬ್ ಧರಿಸಿದ್ದ ಕಾರಣ ನನಗೆ ಪರೀಕ್ಷೆಗೆ ಅವಕಾಶ ನೀಡುತ್ತಿಲ್ಲ. ನನ್ನ ಭವಿಷ್ಯ ಮತ್ತು ಕನಸನ್ನ ಹತ್ತಿಕ್ಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ರಾಜಕೀಯ ಕಾರಣಕ್ಕಾಗಿ ನಮಗೆ ಹೀಗೆಲ್ಲ ಮಾಡುತ್ತಿದ್ದಾರೆ. ನಾವು ಮತ್ತೆ ನಮ್ಮ ಹಕ್ಕಿನೊಂದಿಗೆ ವಾಪಸ್ ಆಗುತ್ತೇವೆ ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಹೇಳಿದ್ದಾಳೆ. (ಸಾಂದರ್ಭಿಕ ಚಿತ್ರ)
8/ 8
ಇನ್ನೂ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಪ್ರಕರಣ ಸುಪ್ರೀಂ ಅಂಗಳದಲ್ಲಿದೆ. (ಸಾಂದರ್ಭಿಕ ಚಿತ್ರ)