Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಹಾಸಿಗೆಯಲ್ಲಿ ಮೈಗೆ ಏನೋ ತಣ್ಣನೆಯ ವಸ್ತು ತಾಗಿದ ಅನುಭವವಾಗಿದೆ. ಆಗ ಯುವತಿ ಬೆಚ್ಚಿ ಬಿದ್ದಿದ್ದಾಳೆ.

First published:

  • 17

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ಹಾವು ಅಂದರೆ ಎಲ್ರಿಗೂ ಕೊಂಚ ಹೆದರಿಕೆ, ಭಯ. ದೂರದಲ್ಲಿ ಹಾವು ಕಂಡರೂ ಒಂದು ಹೆಜ್ಜೆ ಹಿಂದಿಡುವಷ್ಟು ಆತಂಕ. ಆದರೆ ಇಲ್ಲೋರ್ವ ಯುವತಿ ಮಾತ್ರ ರಾತ್ರಿಯಿಡೀ ಹಾವಿನ ಜೊತೆ ನಿದ್ರೆ ಮಾಡಿದ್ದಾಳೆ!  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ಹೌದು, ಇಂತಹದ್ದೊಂದು ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ತುಡಾನಕಲ್ ಬಳಿ ನಡೆದಿದೆ ಎಂದು  'ವಿಜಯವಾಣಿ' ವರದಿ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ತುಡಾನಕಲ್ ಗ್ರಾಮದ ಯುವತಿ ಎಂದಿನಂತೆ ಸಹಜವಾಗಿ ರಾತ್ರಿ ನಿದ್ರಿಸಲು ಹಾಸಿಗೆಯಲ್ಲಿ ಮಲಗಿದ್ದಾಳೆ. ಆಗ ಹಾಸಿಗೆಯಲ್ಲಿ ಹಾವು ಇರುವುದು ಗೊತ್ತಾಗಿಲ್ಲ. ಆಕೆ ಪ್ರತಿದಿನದಂತೆ ಆರಾಮಾಗಿ ನಿದ್ರೆ ಹೋಗಿದ್ದಾಳೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ಆದರೆ ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಹಾಸಿಗೆಯಲ್ಲಿ ಮೈಗೆ ಏನೋ ತಣ್ಣನೆಯ ವಸ್ತು ತಾಗಿದ ಅನುಭವವಾಗಿದೆ. ಆಗ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಆಗಲೇ ಯುವತಿ ತಾವು ಇಡೀ ರಾತ್ರಿ ಹಾವಿನ ಜೊತೆ ನಿದ್ರೆ ಮಾಡಿದ್ದು ಗೊತ್ತಾಗಿದೆ. v

    MORE
    GALLERIES

  • 57

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಒಟ್ಟಾರೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದ ಈ ಘಟನೆ ಸಾಕಷ್ಟು ವೈರಲ್ ಆಗ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

     ಈ ಹಿಂದೆಯೂ ಶಿವಮೊಗ್ಗದಲ್ಲಿ ಹಾವಿಗೆ ಸಂಬಂಧಿಸಿದ ವಿಚಿತ್ರ ಘಟನೆಯೊಂದು ನಡೆದಿತ್ತು. 2022ರ ಸೆಪ್ಟೆಂಬರ್​ನಲ್ಲಿ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎನ್ನಲಾದ ಘಟನೆಯೊಂದು ವರದಿಯಾಗಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Shivamogga Viral News: ಇಡೀ ರಾತ್ರಿ ಹಾವಿನೊಂದಿಗೆ ಮಲಗಿದ ತೀರ್ಥಹಳ್ಳಿಯ ಯುವತಿ!

    ಮಲೆನಾಡ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಹಾವುಗಳು ಸೇರಿದಂತೆ ವೈವಿಧ್ಯಮಯ ವನ್ಯಜೀವಿಗಳ ತವರೂರಾಗಿದೆ. ಸದ್ಯ ಹಾವಿನ ಜೊತೆ ನಿದ್ರಿಸಿದ ಯುವತಿಯ ಘಟನೆ ಮಾತ್ರ ಕೊಂಚ ಆತಂಕ ಮೂಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES