ವಿದ್ಯಾಶ್ರೀ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಸವೆ ಗ್ರಾಮದ ಕುಂಟಿಗೆಯ ಪಟೇಲ್ ಈಶ್ವರಪ್ಪ ಗೌಡ ಎಂಬವರ ಪುತ್ರಿಯಾಗಿರುವ ವಿದ್ಯಾಶ್ರೀ ಸಾಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.
2/ 8
ಪ್ರತಿ ನಿತ್ಯ ಕಾಲೇಜಿಗೆ ತೆರಳುವ ವೇಳೆ ಪ್ರೀತಿಸುವಂತೆ ಶಶಾಂಕ್ ಎಂಬಾತ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಶಶಾಂಕ್ ಯುವತಿಯ ಪಕ್ಕದ್ಮನೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
3/ 8
ವಿದ್ಯಾಶ್ರೀ ಯುವಕನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರು. ಆದ್ರೆ ಯುವಕ ಮಾತ್ರ ಪ್ರತಿನಿತ್ಯ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಶಶಾಂಕ್ ಕಿರುಕುಳಕ್ಕೆ ಬೇಸತ್ತು ಏಪ್ರಿಲ್ 19ರಂದು ವಿದ್ಯಾಶ್ರೀ ವಿಷ ಸೇವಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್ ನ ಕೆಎಂಸಿ ಆಸ್ಪತ್ರೆಯಲ್ಲಿ ವಿದ್ಯಾಶ್ರೀ ಭಾನುವಾರ ಸಾವನ್ನಪ್ಪಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ವಿದ್ಯಾಶ್ರೀ ಸಾವಿನ ಸಂಬಂಧ ಸೋದರ ರಕ್ಷಿತ್ ದೂರು ದಾಖಲಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. (ಸಾಂದರ್ಭಿಕ ಚಿತ್ರ)
6/ 8
ನಮ್ಮ ಮಗಳ ಸಾವಿಗೆ ಶಶಾಂಕ್ ಕಾರಣ. ಹಾಗಾಗಿ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ವಿದ್ಯಾಶ್ರೀ ಪೋಷಕರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಏಪ್ರಿಲ್ 27ರಂದು ಬೆಂಗಳೂರಿನ ಸುಂಕದಕಟ್ಟೆ ಬಳಿ ಯುವತಿ ಮೇಲೆ ಆಸಿಡ್ ದಾಳಿ ನಡೆದಿತ್ತು. ಯುವತಿ ತನ್ನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಕೋಪಗೊಂಡಿದ್ದ ಆರೋಪಿ ನಾಗೇಶ್ ಆಸಿಡ್ ದಾಳಿ ನಡೆಸಿದ್ದನು. (ಸಾಂದರ್ಭಿಕ ಚಿತ್ರ)
8/ 8
ಘಟನೆ ನಡೆದ ಎರಡೂ ವಾರಗಳು ಕಳೆದರೂ ಆರೋಪಿಯ ಬಂಧನವಾಗಿಲ್ಲ. ಪೊಲೀಸರು ಆರೋಪಿಯ ವಿವಿಧ ವೇಷದಲ್ಲಿರುವ ಫೋಟೋಗಳನ್ನು ರಿಲೀಸ್ ಮಾಡಿ, ಸಾರ್ವಜನಿಕರಿಂದ ಸಹಾಯ ಕೇಳಿದ್ದಾರೆ. (ಸಾಂದರ್ಭಿಕ ಚಿತ್ರ)