Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

ಚಂದ್ರಗುತ್ತಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ಸ್ಥಳೀಯ ಗ್ರಾಮ ಪಂಚಾಯಿತ್​ನಿಂದ ಮೀನು ಸಾಕಾಣಿಕೆಗೆ 2 ವರ್ಷದ ಅವಧಿಗೆ ಕೆರೆ ಹರಾಜು ಪ್ರಕ್ರಿಯೆ ಮಾಡಲಾಗಿತ್ತು.

First published:

  • 17

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ವಿಶಾಲವಾದ ಕೆರೆಯಲ್ಲಿ ನೂರಾರು ಜನರು, ಕೈಯಲ್ಲಿರೋ ವಿಶಿಷ್ಟ ಸಾಧನವನ್ನು ನೀರಲ್ಲಿ ಮುಳುಗಿಸ್ತಾ ಅತ್ತಂದಿತ್ತ ತಿರುಗ್ತಿರೋ ಇವರೆಲ್ಲ ಏನ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ನೀವು ಅಚ್ಚರಿಪಡ್ತೀರ! (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆರೆ ಬೇಟೆಯು ಚಂದ್ರಗುತ್ತಿ ಗ್ರಾಮದ ಮಲ್ಲೇಕೆರೆಯಲ್ಲಿ ನಡೆಯಿತು. ನೂರಾರು ಮೀನು ಪ್ರಿಯರು ಕೆರೆ ಬೇಟೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಚಂದ್ರಗುತ್ತಿ ಸೇರಿದಂತೆ ಜೋಳದಗುಡ್ಡೆ, ಚಿಕ್ಕಮಾಕೊಪ್ಪ, ಯಡಗೊಪ್ಪ, ಚನ್ನಪಟ್ಟಣ, ಬೆನ್ನೂರು, ಹರೀಶಿ, ಗುಡುವಿ, ಅಂದವಳ್ಳಿ, ತಾಲೂಕಿನ ವಿವಿಧ ಭಾಗಗಳಿಂದ ಮೀನು ಪ್ರಿಯರು ಕೆರೆ ಬೇಟೆಯಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಕ್ರೀಡೆ ಕೆರೆ ಬೇಟೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಮನರಂಜನೆ ಪಡೆದುಕೊಂಡರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಚಂದ್ರಗುತ್ತಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ಸ್ಥಳೀಯ ಗ್ರಾಮ ಪಂಚಾಯಿತ್​ನಿಂದ ಮೀನು ಸಾಕಾಣಿಕೆಗೆ 2 ವರ್ಷದ ಅವಧಿಗೆ ಕೆರೆ ಹರಾಜು ಪ್ರಕ್ರಿಯೆ ಮಾಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಅದರಂತೆ ಗುತ್ತಿಗೆದಾರರು ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಟ್ಟು ಸಾಕಿದ್ದರು. ಈ ಬೇಸಿಗೆಯಲ್ಲಿ ಕೆರೆಯ ನೀರು ಕಡಿಮೆಯಾದ ಸಮಯದಲ್ಲಿ ಕೆರೆ ಬೇಟೆ ಮಾಡಲು ನಿರೀಕ್ಷಿಸಿ ಒಂದು ಕೂಣಿಗೆ 300 ರೂ. ಗಳಂತೆ ದರ ನಿಗದಿಪಡಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಮಲೆನಾಡಿನ ಜನರ ಸೊಗಡಾದ ಕೆರೆ ಬೇಟೆಯಲ್ಲಿ ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆಯನ್ನು ಮಾಡಿದ ಗ್ರಾಮಸ್ಥರು ಸುಮಾರು 4 ರಿಂದ 5 ಕೆ.ಜಿ ತೂಕವುಳ್ಳ ಮೀನುಗಳನ್ನು ಶಿಕಾರಿ ಮಾಡಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Shivamogga: ಕೆರೆ ಬೇಟೆಯಲ್ಲಿ ಮೀನು ಶಿಕಾರಿ, ಚಂದ್ರಗುತ್ತಿಯಲ್ಲಿ ಮತ್ಸ್ಯ ಬೇಟೆ!

    ಈ ಮೂಲಕ ಸ್ಥಳೀಯರು ಕೆರೆ ಬೇಟೆಯಲ್ಲಿ ಸಂಭ್ರಮಿಸಿದರು. ಇನ್ನು ಕೆರೆ ಬೇಟೆ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಪಾಲ್ಗೊಂಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES