Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

ಈ ಗ್ರಾಮ ಪಂಚಾಯತ್ ವ್ಯಾಪ್ತಿಯ 3500 ಎಕರೆ ಜಾಗದಲ್ಲಿ ರೈತರು ಕಳೆದ ಹಲವಾರು ವರ್ಷಗಳಿಂದ ಅಡಿಕೆ ತೋಟ, ಭತ್ತ, ಗೇರು, ಏಲಕ್ಕಿ ಮುಂತಾದ ಬೆಳೆ ಬೆಳೆಯುತ್ತಿದ್ದಾರೆ.

First published:

 • 17

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಎಲ್ಲೆಲ್ಲೂ ಚುನಾವಣೆಯ ಹವಾ, ಆದ್ರೆ ಮಲೆನಾಡಿನ ಹಲವು ಗ್ರಾಮಗಳ ಜನರು ಈ ಬಾರಿ ವೋಟ್ ಹಾಕಲ್ಲ ಅಂತಿದ್ದಾರೆ. ಇನ್ನೇನು ಮತದಾನಕ್ಕೆ ಕೆಲವೇ ದಿನ ಇರುವಾಗ ರಾಜಕಾರಣಿಗಳ ವಿರುದ್ಧ ಊರನ್ನು ಕಾಪಾಡುವ ಉದ್ದೇಶಕ್ಕೆ ಮತದಾನ ಬಹಿಷ್ಕಾರ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಜನವಸತಿ ಪ್ರದೇಶವನ್ನ ಜೀವ ವೈವಿಧ್ಯ ವಲಯಕ್ಕೆ ಸೇರ್ಪಡೆ ಮಾಡಿರುವುದನ್ನ ವಿರೋಧಿಸಿ ಶರಾವತಿ ಹಿನ್ನೀರಿನ ಹಲವು ಗ್ರಾಮಗಳ ಗ್ರಾಮಸ್ಥರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ.

  MORE
  GALLERIES

 • 37

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿ ಸಂತ್ರಸ್ಥವಾದ ಗ್ರಾಮಗಳ 2 ಗ್ರಾಮ ಪಂಚಾಯತ್ ವ್ಯಾಪ್ತಿಯ 20ಕ್ಕೂ ಅಧಿಕ ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರದ ಪ್ಲೆಕ್ಸ್​ಗಳನ್ನು ಹಾಕಲಾಗಿದೆ.

  MORE
  GALLERIES

 • 47

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಶರಾವತಿ ಹಿನ್ನೀರಿನ ಅಂಬಾರಗುಡ್ಡ ಸುತ್ತಮುತ್ತಲಿನ ಸುಮಾರು 3500ಕ್ಕೂ ಹೆಚ್ಚು ಎಕರೆ ಜಾಗವನ್ನು ಸರ್ಕಾರ ಜೀವ ವೈವಿಧ್ಯ ತಾಣವೆಂದು ಘೋಷಿಸಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

  MORE
  GALLERIES

 • 57

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಕುದರೂರು ಮತ್ತು ಸಂಕಣ್ಣ ಶಾನುಭೋಗ್ ಗ್ರಾಮ ಪಂಚಾಯತ್ ವ್ಯಾಪ್ತಿಯ 20ಕ್ಕೂ ಅಧಿಕ ಗ್ರಾಮಗಳು ಸರ್ಕಾರ ಘೋಷಣೆ ಮಾಡಿದ ಜೀವವೈವಿಧ್ಯ ತಾಣದ ವ್ಯಾಪ್ತಿಗೆ ಸೇರುತ್ತವೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯ 3500 ಎಕರೆ ಜಾಗದಲ್ಲಿ ರೈತರು ಕಳೆದ ಹಲವಾರು ವರ್ಷಗಳಿಂದ ಅಡಿಕೆ ತೋಟ, ಭತ್ತ, ಗೇರು, ಏಲಕ್ಕಿ ಮುಂತಾದ ಬೆಳೆ ಬೆಳೆಯುತ್ತಿದ್ದಾರೆ.

  MORE
  GALLERIES

 • 67

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಈಗ ಏಕಾಏಕಿ ಅರಣ್ಯಧಿಕಾರಿಗಳು ಬಂದು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ರೈತರ ಜಮೀನಿನಲ್ಲಿ ಏನೂ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

  MORE
  GALLERIES

 • 77

  Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!

  ಕೊಡನವಳ್ಳಿ, ಹೊನಗೋಡು, ಹಾರೇಕೊಪ್ಪ, ಹಾಳಸಸಿ, ಆವಿಗೆ, ಮೆತ್ತಲಗೋಡು, ಬಾಳೇಕೆರಿ, ಚದುಕೊಳ್ಳಿ, ಹೊಸೂರು ಹೊಸಕೊಪ್ಪ, ಇಕ್ಕಿಬೇಳು ಮುಂತಾದ ಗ್ರಾಮಗಳು ಸರ್ಕಾರ ಘೋಷಣೆ ಮಾಡಿದ ಜೀವ ವೈವಿಧ್ಯ ತಾಣದ ವ್ಯಾಪ್ತಿಯಲ್ಲಿ ಸೇರಿವೆ. ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಈ ಗ್ರಾಮಗಳ ಯಾರೊಬ್ಬರೂ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES