Chocolate Poison: ಶಿವಮೊಗ್ಗದಲ್ಲಿ ಚಾಕೋಲೆಟ್ ಅಂತ ಇಲಿ ಪಾಷಾಣ ತಿಂದು ಮಗು ಸಾವು
ಶಿವಮೊಗ್ಗದಲ್ಲಿ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ಚಾಕೋಲೆಟ್ ಅಂತ ಇಲಿ ಪಾಷಾಣ ತಿಂದು ಮಗು ಮೃತಪಟ್ಟಿದೆ.
1/ 7
ಚಾಕೋಲೆಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪುಟ್ಟ ಮಕ್ಕಳಿಂದು ಹಿಡಿದು ದೊಡ್ಡವರಿಗೂ ಚಾಕೋಲೆಟ್ ಅಂದ್ರೆ ಪಂಚಪ್ರಾಣ.
2/ 7
ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಚಾಕೋಲೆಟ್ಗಾಗಿ ಹೇಗೆ ಹಠ ಮಾಡುತ್ತಾರೆ ಅಂತ ಎಲ್ಲರೂ ನೋಡಿದ್ದೇವೆ.
4/ 7
ತೀರ್ಥಹಳ್ಳಿ ತಾಲೂಕಿನ ಬೆಚ್ಚವಳ್ಳಿಯ ಮೇಲಿನಕೊಪ್ಪದಲ್ಲಿ ಈ ದುರಂತ ನಡೆದಿದೆ. ಚಂದ್ರಪ್ಪ ಎಂಬುವವರ ಪುತ್ರ ಪ್ರೀತಮ್ ಚಾಕೋಲೆಟ್ ಎಂದು ಇಲಿ ಪಾಷಾಣ ತಿಂದು ಮೃತಪಟ್ಟಿದ್ದಾರೆ.
5/ 7
ರಾತ್ರಿ ಚಾಕೋಲೆಟ್ ಎಂದು ಭಾವಿಸಿ ಇಲಿ ಪಾಷಾನವನ್ನು ಬಾಲಕ ಸೇವಿಸಿದ್ದಾನೆ. ನಂತೆ ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಾಸಿಗಲಾಗಿತ್ತು.
6/ 7
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
7/ 7
ನೀವು ಕೂಡ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಇಲಿ ಪಾಷಾಣ ಅಥವಾ ಬೇರೆ ಯಾವುದಾದರೂ ವಿಷಕಾರಿ ಪದಾರ್ಥಗಳು ಇದ್ದರೆ ಅವರ ಕೈಗೆ ಸಿಗದಂತೆ ಎಚ್ಚರವಹಿಸಿ.
First published: